Monday, April 21, 2025
Google search engine

Homeಅಪರಾಧಹನೂರು: ಕೆಎಸ್ ಆರ್ ಟಿಸಿ ಬಸ್ ಚಕ್ರಕ್ಕೆ ಬೈಕ್ ಸಿಲುಕಿ ಸವಾರ ಸಾವು

ಹನೂರು: ಕೆಎಸ್ ಆರ್ ಟಿಸಿ ಬಸ್ ಚಕ್ರಕ್ಕೆ ಬೈಕ್ ಸಿಲುಕಿ ಸವಾರ ಸಾವು

ಹನೂರು: ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಒಳಾಂಗಣಕ್ಕೆ ಬಸ್ ತಿರುಗಿಸುವಾಗ ಅಚಾನಕ್ಕಾಗಿ ಮುಂಬಾಗದ ಚಕ್ರಕ್ಕೆ ನುಗ್ಗಿದ ಬ್ಯೆಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವಂಥ ಘಟನೆ ಮಂಗಳವಾರದಂದು ಜರುಗಿದೆ.

ಹನೂರು ತಾಲ್ಲೂಕಿನ ಚಂಗವಾಡಿ ಗ್ರಾಮದ ಚಿನ್ನಸ್ವಾಮಿ (೩೫) ಎಂಬಾತನೆ ಮೃತಪಟ್ಟ ದುರ್ದೇವಿ.

ಚಿನ್ನಸ್ವಾಮಿ ಬನ್ನೂರಿನಲ್ಲಿ‌ ಕೆಲಸ ನಿತ್ಬಹಿಸುತ್ತಿದ್ದ ದಸರಾ ಹಬ್ಬದ ನಿಮ್ಮಿತ್ತ ಬನ್ನೂರಿನಿಂದ ತಮ್ಮ ಸ್ವಗ್ರಾಮ ಹನೂರು ತಾಲ್ಲೂಕಿನ  ಚಂಗವಾಡಿಗೆ ಆಗಮಿಸಿ ತದನಂತರ ಕಾರ್ಯನಿಮ್ಮಿತ್ತ ಹನೂರು ಪಟ್ಟಣಕ್ಕೂ ಆಗಮಿಸಿದ್ದ.

ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬೈಕ್ ನಲ್ಲಿ ಬರುತ್ತಿದ್ದಂತ ಸಂದರ್ಭದಲ್ಲಿ ಕೊಳ್ಳೇಗಾಲದಿಂದ ಹನೂರಿನ ಬಸ್ ನಿಲ್ದಾಣದ ಒಳಾಂಗಣಕ್ಕೆ ಬಸ್  ತಿರುಗಿಸುವಾಗ ಅಚಾನಕ್ಕಾಗಿ  ಬೈಕ್  ಬಸ್ ನ ಮುಂಭಾಗದ ಚಕ್ರದ ಒಳಗೆ ಸಿಲುಕಿ ಈ ಅವಘಡ ಸಂಭವಿಸಿ ಸ್ಥಳದಲ್ಲಿ ಮೃತ ಪಟ್ಟಿದ್ದಾನೆ.

ಇನ್ನು ಸ್ಥಳಕ್ಕೆ ಹನೂರು ಪೋಲಿಸರು ಆಗಮಿಸಿ ಮೃತ ದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular