ಶಿವಮೊಗ್ಗ : ಮಹಾನಗರ ಪಾಲಿಕೆ ಕೊನೆ ಕ್ಷಣದಲ್ಲಿ ಜಂಬೂ ಸವಾರಿ ನಿಯಮವನ್ನು ಬದಲಾವಣೆ ಮಾಡಿದೆ. ಆನೆ ಮೇಲೆ ದೇವಿ ಮೆರವಣಿಗೆ ಮಾಡದಿರಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ನಡೆದ ಆಯುಕ್ತ ಮಾಯಣ್ಣಗೌಡ ಮತ್ತು ಪಾಲಿಕೆ ಸದಸ್ಯರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಾಲಾಗಿದೆ.
ಸಾಗರ, ನೇತ್ರಾವತಿ ಮತ್ತು ಹೇಮಾವತಿ ಆನೆಗಳು ಶಿವಮೊಗ್ಗ ದಸರಾದಲ್ಲಿ ಭಾಗವಹಿಸಲಿದ್ದವು. ಈ ಬಾರಿ ಸಾಗರ್ ಆನೆ ಮೇಲೆ ದೇವಿ ಮೆರವಣಿಗೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ನಿಶಾನೆ ೨೫ ವರ್ಷದ ನೇತ್ರಾವತಿ ಹೆಣ್ಣಾನೆಗೆ ಜನ್ಮ ನೀಡಿತು. ಹೀಗಾಗಿ ನೇತ್ರಾವತಿ ಆನೆ ಮತ್ತು ಮರಿಯನ್ನು ಸಕ್ರೆಬೈಲ್ ಆನೆ ಶಿಬಿರಕ್ಕೆ ಕಳುಹಿಸಲಾಗಿದೆ. ನಿಶಾನೆ ಇಲ್ಲದ ಕಾರಣ ಸಾಗರ್ ಆನೆ ಮೇಲೆ ದೇವಿ ಮೆರವಣಿಗೆ ಮಾಡುವುದನ್ನು ಕೈ ಬಿಡಲಾಗಿದೆ.