Saturday, April 19, 2025
Google search engine

Homeರಾಜ್ಯಮಡಿಕೇರಿ: ದಸರಾ ಶೋಭಾಯಾತ್ರೆ ವೇಳೆ ಟ್ರ್ಯಾಕ್ಟರ್ ಮಗುಚಿ ಮೂವರಿಗೆ ಗಾಯ

ಮಡಿಕೇರಿ: ದಸರಾ ಶೋಭಾಯಾತ್ರೆ ವೇಳೆ ಟ್ರ್ಯಾಕ್ಟರ್ ಮಗುಚಿ ಮೂವರಿಗೆ ಗಾಯ

ಮಡಿಕೇರಿ: ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆ ವೇಳೆ ಮಂಟಪವೊಂದರ ಟ್ರಾಕ್ಟರ್ ಮುಗುಚಿ ಬಿದ್ದಿದ್ದು, ಮೂವರಿಗೆ ಗಾಯಗಳಾಗಿವೆ.

ಶೋಭಾಯಾತ್ರೆ ಆರಂಭವಾದ ಬಳಿಕ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯ ಮಂಟಪವು ದೇಗುಲದಿಂದ ಮೆರವಣಿಗೆಯಲ್ಲಿ ಹೊರಟಿತು. ಡಿಸಿಸಿ ಬ್ಯಾಂಕ್ ಸಮೀಪ ಇಳಿಜಾರಿನ ರಸ್ತೆಯಲ್ಲಿ ಮಂಟಪ ಇರಿಸಲಾಗಿದ್ದ ಟ್ರಾಕ್ಟರ್ ಬುಧವಾರ ನಸುಕಿನ 3.30 ರ ವೇಳೆ ಮುಗುಚಿತು. ಇದರಿಂದ ಮೂವರಿಗೆ ಗಾಯಗಳಾಗಿವೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಸ್ಥಳದಲ್ಲಿ ಅಪಾರ ನೂಕುನುಗ್ಗಲು ಉಂಟಾಯಿತು.‌ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಪರದಾಡಿದರು.

ಈ ಕುರಿತು ಪ್ರತಿಕ್ರಿಯಿಸಿದ ದೇಗುಲ ಸಮಿತಿಯ ಸದಸ್ಯರೊಬ್ಬರು, ದೇಗುಲದ ಸಮೀಪ ಹಾಗೂ ಮೆರವಣಿಯಲ್ಲಿ ಒಟ್ಟು ಎರಡು ಪ್ರದರ್ಶನ ನೀಡಿದ್ದೆವು. ನಸುಕಿನ 4 ಗಂಟೆಗೆ ತೀರ್ಪುಗಾರರ ಮುಂದೆ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಆ ಸ್ಥಳ ತಲುಪುವ ಮುನ್ನ ಟ್ರಾಕ್ಟರ್ ಮುಗುಚಿತು ಎಂದರು.

RELATED ARTICLES
- Advertisment -
Google search engine

Most Popular