ಮಂಡ್ಯ: ಸಕ್ಕರೆ ನಾಡು ಮಂಜಿನ ನಗರಿಯಾಗಿದ್ದು, ಜಿಲ್ಲೆಯಾದ್ಯಂತ ದಟ್ಟ ಮಂಜು ಕವಿದಿದೆ.
ಮಂಜು ಕವಿದ ವಾತಾವರಣದಿಂದ ಚುಮು ಚುಮು ಚಳಿ ಪ್ರಾರಂಭವಾಗಿದ್ದು, ಬೆಳಿಗ್ಗೆ 9 ಗಂಟೆಯಾದ್ರು ಜಿಲ್ಲೆಯ ಹಲವು ಕಡೆ ಮಂಜು ಕವಿದ ವಾತಾವರಣ ಕಂಡುಬಂದಿದೆ.
ದಟ್ಟ ಮಂಜಿನಿಂದ ಹೆದ್ದಾರಿಯಲ್ಲಿ ದಾರಿ ಕಾಣದೆ ವಾಹನ ಸವಾರರು ಪರದಾಡಿದ್ದಾರೆ.
