Sunday, April 20, 2025
Google search engine

HomeUncategorizedರಾಷ್ಟ್ರೀಯತಮಿಳುನಾಡು: ರೈಲಿಗೆ ಸಿಲುಕಿ ಮೂವರು ಮಕ್ಕಳು ಸಾವು

ತಮಿಳುನಾಡು: ರೈಲಿಗೆ ಸಿಲುಕಿ ಮೂವರು ಮಕ್ಕಳು ಸಾವು

ತಮಿಳುನಾಡು: ತಮಿಳುನಾಡಿನ ಚೆಂಗಲ್‌ ಪಟ್ಟುವಿನ ಉರಪಕ್ಕಂ ರೈಲು ನಿಲ್ದಾಣದಲ್ಲಿ ಮಂಗಳವಾರ ರೈಲು ಹಳಿ ದಾಟಲು ಯತ್ನಿಸುತ್ತಿದ್ದ ಮೂವರು ಮಕ್ಕಳ ಮೇಲೆ ರೈಲು ಹರಿದು ಮೃತಪಟ್ಟಿದ್ದಾರೆ.

ಮೂವರು ಮಕ್ಕಳಲ್ಲಿ ಇಬ್ಬರು ದಿವ್ಯಾಂಗರಾಗಿದ್ದರು,  ಶ್ರವಣ ದೋಷವಿತ್ತು ಜತೆಗೆ ಮಾತು ಕೂಡ ಬರುತ್ತಿರಲಿಲ್ಲ ಎಂಬುದು ತಿಳಿದುಬಂದಿದೆ.

ಅವರನ್ನು ಶ್ರವಣದೋಷವುಳ್ಳ ಸುರೇಶ್(15), ಮಾತು ಬಾರದ  ರವಿ(10) ಮತ್ತು ಮಂಜುನಾಥ್(11) ಎಂದು ಗುರುತಿಸಲಾಗಿದ್ದು, ವಾರಾಂತ್ಯದಲ್ಲಿ ತನ್ನ ಕುಟುಂಬದೊಂದಿಗೆ ದೀರ್ಘ ವಾರಾಂತ್ಯವನ್ನು ಕಳೆಯಲು ಊರಪಕ್ಕಂಗೆ ಹೋಗಿದ್ದರು.

ಹಳಿಗಳ ಬಳಿ ಮಕ್ಕಳು ಆಟವಾಡುತ್ತಿದ್ದು, ರೈಲು ಹಳಿ ದಾಟಲು ಯತ್ನಿಸಿದಾಗ ರೈಲು ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಬೀಚ್ ಸ್ಟೇಷನ್ ಮತ್ತು ಚೆಂಗಲ್ಪಟ್ಟು ನಡುವೆ ಸಂಚರಿಸುವ ಸಬ್ ಅರ್ಬನ್ ರೈಲು. ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಗುಡುವಂಚೇರಿ ಪೊಲೀಸರು ಮತ್ತು ರೈಲ್ವೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹಳಿಯಿಂದ ಹೊರತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular