Sunday, April 20, 2025
Google search engine

Homeಸ್ಥಳೀಯಮೈಸೂರು ದಸರೆಗೆ ಹೊಸ ನೋಟ ಕೊಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

ಮೈಸೂರು ದಸರೆಗೆ ಹೊಸ ನೋಟ ಕೊಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

ಮೈಸೂರು: ನಾಡಹಬ್ಬ ಮೈಸೂರು ದಸರೆಗೆ ಹೊಸ ನೋಟ ಕೊಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ಎಸ್.ಬಂಗಾರಪ್ಪ ಹಾಗೂ ಎಸ್‌.ಎಂ. ಕೃಷ್ಣ ಮಂತ್ರಿ ಮಂಡಲದಲ್ಲಿದ್ದಾಗ ದಸರಾ ನೋಡಿದ್ದನ್ನು ನೆನೆದರು. ಪಂಜಿನ ಕವಾಯತು ತುಂಬಾ ಚೆನ್ನಾಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ನಡೆದಿದೆ. ದಸರೆಗೆ ಲಕ್ಷಾಂತರ ಮಂದಿ ಬಂದಿದ್ದರು. ಮುಂದಿನ ದಿನಗಳಲ್ಲಿ ಥೀಮ್ ಬದಲಾಗಬೇಕು ಎಂದು ತಿಳಿಸಿದರು.

ಪರಂಪರೆ ಉಳಿಸಿಕೊಂಡು ಬಂದಿದ್ದೇವೆ‌. ಪ್ರತಿ ಜಿಲ್ಲೆಗಳಲ್ಲೂ ಸ್ತಬ್ಧಚಿತ್ರದ ಸ್ಪರ್ಧೆ ನಡೆಯಬೇಕು. ಈ ಉತ್ಸವಕ್ಕೆ 400 ವರ್ಷಗಳ ಇತಿಹಾಸವಿದೆ. ಪರಂಪರೆಯನ್ನು ಉಳಿಸಿಕೊಂಡು ನೂತನ ನೋಟ ಕೊಡಬೇಕು. ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡಬೇಕು. ಮೈಸೂರಿಗೆ ಬರುವ ಅತಿಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದರು.

ಇಲ್ಲಿನ ಅಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆದರೆ, ದಸರೆಯನ್ನು ಮೈಸೂರಿಗೆ ಸೀಮಿತಗೊಳಿಸಲು ಬಿಡುವುದಕ್ಕೆ ಸಾಧ್ಯವಿಲ್ಲ. ರಾಜ್ಯಮಟ್ಟದ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular