Monday, April 21, 2025
Google search engine

Homeಅಪರಾಧದಸರಾ: ಆನೆ ಹೊತ್ತು ಸಾಗುತ್ತಿದ್ದ ವಾಹನಕ್ಕೆ ಅಪಘಾತ, ಚಾಲಕ ಸಾವು

ದಸರಾ: ಆನೆ ಹೊತ್ತು ಸಾಗುತ್ತಿದ್ದ ವಾಹನಕ್ಕೆ ಅಪಘಾತ, ಚಾಲಕ ಸಾವು

ಆನೇಕಲ್: ಅಂಬಾರಿ ಹೊತ್ತಿದ್ದ, ಆನೆ ಹೊತ್ತು ಸಾಗುತ್ತಿದ್ದ ವಾಹನಕ್ಕೆ ಅಪಘಾತವಾಗಿದ್ದು, ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ರಾಜ್ಯದ ಗಡಿಭಾಗ ತಮಿಳುನಾಡಿನ ಸಾನಮಾವು ಸಮೀಪದ ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಆರೋಗ್ಯ ಸ್ವಾಮಿ (೪೫ ವರ್ಷ) ಮೃತ ದುರ್ದೈವಿ. ದಸರಾ ಜಂಬೂ ಸವಾರಿ ಮುಗಿಸಿಕೊಂಡು ಹಿಂತಿರುಗುವಾದ ದುರಂತ ನಡೆದಿದೆ.

ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಅಂಬಾರಿ ಉತ್ಸವ ಇತ್ತು. ಹೀಗಾಗಿ ಅಂಬಾರಿ ಹೊರಲು ತಿರುಚ್ಚಿಯಿಂದ ಆನೆ ಬಂದಿತ್ತು. ಅಂಬಾರಿ ಉತ್ಸವನ್ನು ಮುಗಿಸಿಕೊಂಡು, ಆನೆಯನ್ನು ಈಚರ್ ವಾಹನದಲ್ಲಿ ಆರು ಮಂದಿ ಕರೆದೊಯ್ಯುತ್ತಿದ್ದರು. ಸಾನಮಾವು ಸಮೀಪದಲ್ಲಿ ಮೂತ್ರ ವಿಸರ್ಜನೆಗೆಂದು ಚಾಲಕ ಆರೋಗ್ಯ ಸ್ವಾಮಿ ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿದ್ದಾನೆ. ರಸ್ತೆ ಪಕ್ಕದಲ್ಲಿನ ಪ್ರದೇಶ ಇಳಿಜಾರು ಇದ್ದಿದ್ದರಿಂದ ವಾಹನ ಏಕಾಏಕಿ ಮುಂದೆ ಹೋಗಲು ಆರಂಭಿಸಿದೆ.

ಇದನ್ನು ಕಂಡ ಚಾಲಕ ಆರೋಗ್ಯ ಸ್ವಾಮಿ ಚಲಿಸುತ್ತಿದ್ದ ವಾಹನವನ್ನ ನಿಲ್ಲಿಸಲು ಮುಂದಾಗಿದ್ದಾನೆ. ಆದರೆ ಈಚರ್ ವಾಹನ, ಚಾಲಕ ಆರೋಗ್ಯ ಸ್ವಾಮಿ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಹೊಸೂರಿನ ಅಡ್ಕೋ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ಒಂದು ಕ್ರೇನ್ ಹಾಗೂ ಜೆಸಿಬಿ ಮೂಲಕ ಆನೆ ಇದ್ದ ವಾಹನವನ್ನ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಚಾಲಕ ಆರೋಗ್ಯಸ್ವಾಮಿಯ ಮೃತದೇಹವನ್ನ ಹೊಸೂರಿನ ಸರ್ಕಾರಿ ಆಸ್ಪತ್ರೆ ರವಾನಿಸಲಾಗಿದೆ.

RELATED ARTICLES
- Advertisment -
Google search engine

Most Popular