Monday, April 21, 2025
Google search engine

Homeರಾಜ್ಯಕಾರು ಪಲ್ಟಿ ಹೊಡೆದು ಅಪಘಾತ: ಇಬ್ಬರ ಸಾವು, 7 ಮಂದಿಗೆ ಗಾಯ

ಕಾರು ಪಲ್ಟಿ ಹೊಡೆದು ಅಪಘಾತ: ಇಬ್ಬರ ಸಾವು, 7 ಮಂದಿಗೆ ಗಾಯ

ವಾಡಿ: ಕಾರು ಪಲ್ಟಿ ಹೊಡೆದು ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟು, ಏಳು ಜನರಿಗೆ ಗಂಭೀರ ಗಾಯಗಳಾದ ಘಟನೆ ಮಂಗಳವಾರ ಮಧ್ಯ ರಾತ್ರಿ ಚಿತ್ತಾಪುರ ತಾಲೂಕಿನ ಹಳಕರ್ಟಿ-ಲಾಡ್ಲಾಪುರ ಗ್ರಾಮಗಳ ನಡುವಿನ ರಾಷ್ಟ್ರೀಯ ಹೆದ್ದಾರಿ-150 ರಲ್ಲಿ ಸಂಭವಿಸಿದೆ.

ರಮೇಶ ಜೀವ್ಲಾ ಪವಾರ (45) ಮತ್ತು ದಯಾನಂದ ದೇವಸಿಂಗ್ (8) ಮೃತಪಟ್ಟವರು.

ಸಂತೋಷ ಹೀರಾ ಪವಾರ, ಅನುಶಾಬಾಯಿ ಹೀರೂ ಪವಾರ, ವೆಂಕಟೇಶ ಹೀರೂ ಪವಾರ, ದಿನೇಶ ಹೀರೂ ಪವಾರ, ಯುವರಾಜ ಹೀರೂ ಪವಾರ, ಸಂಗೀತಾಬಾಯಿ ರಮೇಶ ಪವಾರ, ದೇವಸಿಂಗ್ ಕಿಶನ ಪವಾರ ಗಾಯಗೊಂಡವರು. ಇವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಶಹಾಬಾದ ನಗರಸಭೆ ವ್ಯಾಪ್ತಿಯ ನಿಜಾಮ್ ಬಾಜಾರ್ ಬಡಾವಣೆಯ ನಿವಾಸಿಗಳಾಗಿದ್ದಾರೆ.

ದಸರಾ ಹಬ್ಬದ ನಿಮಿತ್ತ ಇವರೆಲ್ಲರೂ ಯಾದಗಿರಿ ಗಡಿ ಭಾಗದ ಯರಗೋಳ ಗ್ರಾಮ ಸಮೀಪದ ನಿಂಗಸಳ್ಳಿ ತಾಂಡಾದ ಸಂಬಂಧಿಕರ ಮನೆಗೆ ಹಬ್ಬದೂಟಕ್ಕೆಂದು ಒಟ್ಟಿಗೆ ಕಾರಿನಲ್ಲಿ ಹೋಗಿದ್ದರು. ಊಟ ಮುಗಿಸಿಕೊಂಡು ವಾಪಸ್ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ. ಸ್ಥಳದಲ್ಲೇ ಇಬ್ಬರು ಮೃತಪಟ್ಟರೆ, ಎಳು ಜನರು ಗಂಭಿರವಾಗಿ ಗಾಯಗೊಂಡಿದ್ದರು.

ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ ಐ ತಿರುಮಲೇಶ ಕುಂಬಾರ ಹಾಗೂ ಸಿಬ್ಬಂದಿಗಳು, ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿಲಾಗುತ್ತಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular