Monday, April 21, 2025
Google search engine

Homeರಾಜಕೀಯರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ ಯಾರದರೂ ಸ್ವಾಗತಾರ್ಹ: ಆರ್ ಅಶೋಕ್

ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ ಯಾರದರೂ ಸ್ವಾಗತಾರ್ಹ: ಆರ್ ಅಶೋಕ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕರನ್ನಾಗಿ ಹೈಕಮಾಂಡ್ ಯಾರನ್ನೇ ಆಯ್ಕೆ ಮಾಡಿದರೂ ನಾವು ಸ್ವಾಗತ ಮಾಡಲಿದ್ದೇವೆ. ನಮಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದಷ್ಟೇ ಮುಖ್ಯ. ಹಾಗಾಗಿ ನಾವು ಆ ಕಡೆ ಗಮನ ಕೊಡುತ್ತೇವೆ ಎಂದು ಮಾಜಿ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಮಾಧ್ಯದಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಸಂಬಂಧ ಅನೇಕರ ಹೆಸರು ಕೇಳಿಬರುತ್ತಿದೆ. ಶೋಭಾ ಕರಂದ್ಲಾಜೆ ಹೆಸರು ಕೇಳಿಬರುತ್ತಿರುವುದನ್ನು ನಾನೂ ಕೂಡ ಮಾಧ್ಯಮದಲ್ಲಿ ನೋಡಿದೆ. ಶೋಭಾ ಕರಂದ್ಲಾಜೆ ಕೂಡ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ನಾನು ಕೇಂದ್ರದಲ್ಲಿ ಮಂತ್ರಿ ಇದ್ದೇನೆ. ಸಂತೋಷದಿಂದ ಇದ್ದೇನೆ.

ಕೇಂದ್ರದ ನಾಯಕರು ಆದಷ್ಟು ಬೇಗ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಮಾಡಬೇಕು. ಚುನಾವಣೆ ಸಂದರ್ಭದಲ್ಲಿದ್ದಾರೆ. ಪಂಚ ರಾಜ್ಯ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ನಾವೂ ಕೂಡ ಒತ್ತಡ ಹಾಕಲ್ಲ. ಪಂಚ ರಾಜ್ಯ ಚುನಾವಣೆ ಗೆಲ್ಲುವುದಕ್ಕೆ ಮೊದಲ ಆದ್ಯತೆ. ಕೇಂದ್ರದ ನಾಯಕರು ಯಾರನ್ನಾದ್ರೂ ಅಧ್ಯಕ್ಷ, ವಿಪಕ್ಷ ನಾಯಕರನ್ನ ಮಾಡಲಿ. ನಾವೆಲ್ಲರೂ ಸ್ವಾಗತ ಮಾಡುತ್ತೇವೆ. ನಮಗೆ ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಅಂತ ಹೆಬ್ಬಯಕೆ ಅಷ್ಟೆ ಎಂದು ಎಂದು ಆರ್ ಅಶೋಕ್ ತಿಳಿಸಿದರು.

RELATED ARTICLES
- Advertisment -
Google search engine

Most Popular