Monday, April 21, 2025
Google search engine

Homeಸಿನಿಮಾಮೂರು ದಶಕದ ಬಳಿಕ ಬಿಗ್‌ಬಿ ಜೊತೆ ಸೂಪರ್ ಸ್ಟಾರ್: ಅಭಿಮಾನಿಗಳ ಕಾತರ

ಮೂರು ದಶಕದ ಬಳಿಕ ಬಿಗ್‌ಬಿ ಜೊತೆ ಸೂಪರ್ ಸ್ಟಾರ್: ಅಭಿಮಾನಿಗಳ ಕಾತರ

ಬೆಂಗಳೂರು: ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ೩೩ ವರ್ಷಗಳ ಬಳಿಕ ತಮ್ಮ ಸ್ನೇಹಿತನೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ‘ಜೈಲರ್’ ಯಶಸ್ಸಿನ ಬಳಿಕ ಮತ್ತೊಂದು ಚಿತ್ರ ಘೋಷಿಸಿರುವ ಅವರು ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಈ ಸಿನಿಮಾದ ಹೆಸರು ತಲೈವರ್ ೧೭೦.
ಈ ಕುರಿತು ರಜಿನಿಕಾಂತ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ಅಮಿತ್ ಬಚ್ಚನ್ ಜೊತೆಗಿರುವ ಫೋಟೋ ಹಂಚಿಕೊಂಡು, ೩೩ ವರ್ಷಗಳ ಬಳಿಕ ನನ್ನ ಸ್ನೇಹಿತನೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ಅಮಿತಾಬ್ ಬಚ್ಚನ್ ತಮ್ಮ ಮುಂದಿನ ಚಿತ್ರ ಲೈಕಾ ನಿರ್ಮಾಣದ ತಲೈವರ್ ೧೭೦ರಲ್ಲಿ ನಟಿಸುತ್ತಿದ್ದಾರೆ. ಇದೊಂದು ಹೃದಯ ತುಂಬಿದ ಸಮಯವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ತಲೈವರ್ ೧೭೦ ಚಿತ್ರಕ್ಕೆ ಲೈಕಾ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಟಿ.ಜೆ.ಗ್ಯಾನವೆಲ್ ನಿರ್ದೇಶಿಸುತ್ತಿದ್ದಾರೆ. ರಾಣಾ ದುಗ್ಗುಬಾಟಿ ಮತ್ತು ಫಹಾದ್ ಫಸಲ್ ಕೂಡ ನಟಿಸುತ್ತಿದ್ದಾರೆ. ಈ ಮೊದಲೇ ಘೋಷಿಸಿದಂತೆ ಚಿತ್ರದಲ್ಲಿ ದುಶರಾ ವಿಜಯನ್ ರಿತಿಕ ಸಿಂಗ್ ಮಂಜು ವಾರಿಯರ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಜೈಲರ್ ಸಿನಿಮಾಗೆ ಅದ್ಭುತ ಸಂಗೀತ ಸಂಯೋಜಿಸಿದ್ದ ಅನಿರುದ್ದ್ ರವಿಚಂದ್ರನ್ ಅವರ ಸಂಗೀತ ಚಿತ್ರಕ್ಕಿರಲಿದೆ.

RELATED ARTICLES
- Advertisment -
Google search engine

Most Popular