ಮೈಸೂರು: ಆಯುಧ ಪೂಜೆ ಹಾಗೂ ವಿಜಯದಶಮಿಯ ಹಿನ್ನಲೆ ಮಾರಾಟಗಾರರು ಮಾರಾಟ ಮಾಡಿದ ಬಳಿಕ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದ ಬಾಳೆ ದಿಂಡು, ಬೂದು ಕುಂಬಳಕಾಯಿಯನ್ನು ಪಿಂಜರಾ ಪೋಲ್ ಸೊಸೈಟಿಗೆ ಇಂದು ನೀಡಲಾಗಿದೆ.

ವಲಯ ಕಛೇರಿ ಮೂರರ ವ್ಯಾಪ್ತಿಯ ವಿಶ್ವಮಾನವ ಜೋಡಿ ರಸ್ತೆ ಮತ್ತು ಉದಯ ರವಿ ರಸ್ತೆಗಳಲ್ಲಿ ಇದ್ದಂತಹ ಬೂದು ಕುಂಬಳಕಾಯಿ ಮತ್ತು ಬಾಳೆ ದಿಂಡುಗಳನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿ ಚಾಮುಂಡಿ ಬೆಟ್ಟದ ಪಾದದ ಬಳಿ ಇರುವ ಪಿಂಜರಾ ಪೋಲ್ ಸೊಸೈಟಿ ಗೆ ನೀಡಲಾಗಿದೆ.
ಸದರಿ ಕಾರ್ಯವನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಅಸಾದ್ ಉರ್ ರೆಹಮಾನ್ ಷರೀಫ್ ನೇತೃತ್ವದಲ್ಲಿ ನಡೆಸಲಾಗಿದ್ದು, ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
