ಮಂಡ್ಯ: ರೈತ ಹಿತರಕ್ಷಣಾ ಸಮಿತಿ ಹೋರಾಟ 53ನೇ ದಿನಕ್ಕೆ ಕಾಲಿಟ್ಟ ಹಿನ್ನಲೆಯಲ್ಲಿ ಇಂದು ಕಾಲೇಜು ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಸಾತನೂರು ಗ್ರಾ.ಪಂ.ವ್ಯಾಪ್ತಿಯ ಜನರು ಹಾಗೂ ಕಾಲೇಜು ವಿದ್ಯಾರ್ಥಿಗಳು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಮಂಡ್ಯದಲ್ಲಿ ಬೆಂ-ಮೈ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ನೀರು ಬಿಟ್ಟುವುದನ್ನು ತೀವ್ರವಾಗಿ ಖಂಡಿಸಿದ ವಿದ್ಯಾರ್ಥಿಗಳು, ನಮ್ಮ ನೀರು ನಮ್ಮ ಹಕ್ಕು, ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಕೆ.ಆರ್.ಎಸ್.ಡ್ಯಾಂ ನಲ್ಲಿ ನೀರು ಪರಿಶೀಲಿಸಿ ನಂತರ ಬೇರೆಯವರಿಗೆ ನೀರು ಕೊಡಿ. ನಮ್ಮಲ್ಲಿ ನೀರಿಲ್ಲ ಬೇರೆಯವರಿಗೆ ನೀರು ಕೊಡುವುದು ಎಷ್ಟು ಸರಿ ಎಂದು ಕಿಡಿಕಾರಿದರು.

ಎಲ್ಲರು ಸಹ ಕಾವೇರಿ ಹೋರಾಟಕ್ಕೆ ಬರಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ, ಸಂಸದರು, ಶಾಸಕರು ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ತಕ್ಷಣವೇ ರಾಜ್ಯ ಸರ್ಕಾರ ನೀರು ನಿಲ್ಲಿಸಿ ರೈತರನ್ನು ಉಳಿಸುವಂತೆ ಒತ್ತಾಯಿಸಿದರು.