Wednesday, April 23, 2025
Google search engine

Homeರಾಜ್ಯಸುದ್ದಿಜಾಲಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಧಾರವಾಡ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದಿನಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಾಗುತ್ತಿದ್ದು, ಈ ಕುರಿತು ವೇಳಾ ಪಟ್ಟಿಯನ್ನು ನಿಗದಿಪಡಿಸಲಾಗಿದೆ. ಈವರೆಗಿನ ಪರಿಷ್ಕರಣೆಯಾದ ಮತದಾರರ ಪಟ್ಟಿಯನ್ನು ನಾಳೆ ದಿ.೨೮ ರಂದು ಜಿಲ್ಲಾಡಳಿತದ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. ೨೭, ೨೦೨೩ ರಿಂದ ಡಿಸೆಂಬರ್ ೦೯, ೨೦೨೩ ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಹಕ್ಕು ಮತ್ತು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ತಕರಾರು ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.

ಭಾರತ ಚುನಾವಣಾ ಆಯೋಗವು ಅ. ೨೭, ೨೦೨೩ ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಕರಡು ಮತದಾರರ ಯಾದಿಯಲ್ಲಿ ಹೆಸರು ಇರುವ ಬಗ್ಗೆ ಮತ್ತು ಹೆಸರು ತಪ್ಪಾಗಿ ನಮೂದಾಗಿದ್ದರೆ ಹಾಗೂ ಹೊಸದಾಗಿ ಹೆಸರು ಸೇರ್ಪಡೆಗಾಗಿ (ನಮೂನೆ-೬), ಹೆಸರು ತೆಗೆದು ಹಾಕಲು (ನಮೂನೆ-೭), ಹೆಸರು, ವಿಳಾಸ, ಜನ್ಮ ದಿನಾಂಕ ಇತ್ಯಾದಿ ತಿದ್ದುಪಡಿಗಾಗಿ (ನಮೂನೆ-೮) ಹಾಗೂ ವಿಧಾನಸಭಾ ಮತಕ್ಷೇತ್ರದಲ್ಲಿನ ವಿಳಾಸ ತಿದ್ದುಪಡಿ, ಬದಲಾವಣೆಗಾಗಿ (ನಮೂನೆ-೮ಎ) ಅರ್ಜಿಗಳನ್ನು ೨೦೨೩ರ ಡಿಸೆಂಬರ್ ೦೯ರ ವರೆಗೆ ಸಂಬಂಧಿಸಿದ ವಿಧಾನಸಭಾ ಮತಕ್ಷೇತ್ರಗಳಲ್ಲಿ ಅಥವಾ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

೭೫-ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ, ೨೨೮ ಮತಗಟ್ಟೆಗಳಿದ್ದು. ೧,೦೦,೪೨೧ ಪುರುಷ ಮತದಾರರು, ೯೪,೯೦೪ ಮಹಿಳಾ ಮತದಾರರು, ಇತರೆ ೫ ಸೇರಿ ಒಟ್ಟು ೧,೯೫,೩೩೦ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೧೫,೩೮,೬೦೩ ಮತದಾರರಿದ್ದು, ಪುರುಷ ಮತದಾರರು ೭೭೧೭೧೯, ಮಹಿಳಾ ಮತದಾರರು ೭೬೬೭೯೮ ಇತರೆ ಮತದಾರರು ೮೬ ಇದ್ದು. ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರದಲ್ಲಿ ೧೬೫೨ ಮತಗಟ್ಟೆಗಳನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು ೧೫,೩೮,೬೦೩ ಮತದಾರರಿದ್ದು, ಪುರುಷ ಮತದಾರರು ೭,೭೧,೭೧೯, ಮಹಿಳಾ ಮತದಾರರು ೭,೬೬,೭೯೮, ಇತರೆ ಮತದಾರರು ೮೬ ಇದ್ದು, ಜಿಲ್ಲೆಯ ೭ ವಿಧಾನಸಭಾ ಮತಕ್ಷೇತ್ರದಲ್ಲಿ ೧,೬೫೨ ಮತಗಟ್ಟೆಗಳನ್ನು ಒಳಗೊಂಡಿದೆ.

ಈ ಕುರಿತಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ನಡೆಸಲಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಮ್ಮ ತಮ್ಮ ರಾಜಕೀಯ ಪಕ್ಷಗಳಿಂದ ಧಾರವಾಡ ಜಿಲ್ಲೆಯ ೭ (ಏಳು) ವಿಧಾನಸಭಾ ಮತಕ್ಷೇತ್ರವಾರು ಎಲ್ಲ ಮತಗಟ್ಟೆಗಳಿಗೆ ನಿಯಮಾನುಸಾರ ಬಿ..ಎಲ್.ಎ ಗಳನ್ನು ನೇಮಿಸಲು ಈಗಾಗಲೇ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ. ಸಿ.ಡಿ. ಅವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular