Wednesday, April 23, 2025
Google search engine

Homeರಾಜ್ಯಮಂಡ್ಯ ತಾಲ್ಲೂಕು ಆಡಳಿತದ ವಿರುದ್ಧ, ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಿಡುಗಡೆಗೆ ಆಗ್ರಹಿಸಿ ರೈತರ...

ಮಂಡ್ಯ ತಾಲ್ಲೂಕು ಆಡಳಿತದ ವಿರುದ್ಧ, ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಿಡುಗಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಮಂಡ್ಯ: ರೈತ ಸಮಸ್ಯೆಗೆ ಸ್ಪಂದಿಸದ ಮದ್ದೂರು ತಾಲೂಕು ಆಡಳಿತದ ವೈಫಲ್ಯ ಖಂಡಿಸಿ ಮದ್ದೂರು ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಜಮೀನಿಗೆ ಹೋಗುವ ರಸ್ತೆ ಒತ್ತುವರಿಯಾಗಿದ್ದು, ಜಿಲ್ಲಾಧಿಕಾರಿ ತೆರವು ಮಾಡಲು ಆದೇಶ ಮಾಡಿದ್ದರೂ ಕೂಡ ಸರ್ವೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ರೈತರಿಗೆ ತೊಂದರೆಯಾಗುತ್ತಿದೆ. ಒತ್ತುವರಿ ರಸ್ತೆ ತೆರವಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಯಾವುದೇ ಕೆಲಸಕ್ಕೂ ದಲ್ಲಾಳಿಯನ್ನು ಸಂಪರ್ಕಿಸುವ ಪರಿಸ್ಥಿತಿಯನ್ನು ನೌಕರರು ಮಾಡಿದ್ದಾರೆ ಎಂದು ಕಿಡಿಕಾರಿದರು.

ತಹಶಿಲ್ದಾರ್ ತುರ್ತು ಕ್ರಮವಹಿಸಿ ಸಾರ್ವಜನಿಕರ ಕೆಲಸಕ್ಕೆ ಎಚ್ಚರ ವಹಿಸಬೇಕು. ಹಳ್ಳಿಕಾರ್ ತಳಿಯ ಸಂತತಿಯನ್ನು ರೈತ ವರ್ತೂರ್ ಸಂತೋಷ್ ಬೆಳೆಸಿಕೊಂಡು ಬರುತ್ತಿದ್ದಾರೆ. ರೈತ ಸಂತೋಷ್ ಹುಲಿ ಉಗುರು ಧರಿಸಿದ್ದಾರೆ ಎಂಬ ಕಾರಣಕ್ಕೆಅರಣ್ಯ ಇಲಾಖೆ ಬಂಧಿಸಿರುವುದು ಸರಿಯಲ್ಲ. ಮಠಾಧೀಶರು, ರಾಜಕಾರಣಿಗಳ ಮಕ್ಕಳು, ಚಲನಚಿತ್ರ ನಟರು ಸೇರಿ ಹಲವರು ಹುಲಿ ಉಗುರು ಧರಿಸಿದ್ದಾರೆ. ಅವರಿಗೆ ನೋಟಿಸ್ ಮಾತ್ರ ನೀಡಿ ಯುವ ರೈತ ಸಂತೋಷ್ ರನ್ನ ಬಂಧಿಸಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಕೂಡಲೇ ಸಂತೋಷ್ ವಿರುದ್ಧದ ಮೊಕದ್ದಮೆ ಹಿಂಪಡೆದು ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular