ಪಿರಿಯಾಪಟ್ಟಣ: ತಾಲ್ಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿ ನೂತನ ಅಧ್ಯಕ್ಷರಾಗಿ ತೆಲಗಿನಕುಪ್ಪೆ ಗ್ರಾಮದ ಸಣ್ಣತಮ್ಮೇಗೌಡರ ಪುತ್ರ ಟಿ.ಎಸ್ ಉದಯ್ ಅವಿರೋಧ ಆಯ್ಕೆಯಾದರು.
ಪಟ್ಟಣದಲ್ಲಿನ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಬಳಿಕ ನೂತನ ಅಧ್ಯಕ್ಷ ಟಿ.ಎಸ್ ಉದಯ್ ಅವರು ಮಾತನಾಡಿ ನನಗೆ ನೀಡಿರುವ ಅಧಿಕಾರವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ತಾಲೂಕಿನಾದ್ಯಂತ ಸಮಾಜದ ಅಭಿವೃದ್ಧಿಗೆ ಶ್ರಮಿಸಿ ಸಂಘಟನೆಗೆ ಒತ್ತು ನೀಡುವೆ ಎಂದು ತಿಳಿಸಿ ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಎಮ್.ಪಿ ಅಣ್ಣೇಗೌಡ, ಚೌತಿ ಗೋವಿಂದೇಗೌಡ, ಎಂ.ಎಸ್ ಸುರೇಶ್, ರೈತ ಸಂಘದ ಬಿ.ಜೆ ದೇವರಾಜು, ಪಿ.ಸಿ ಕೃಷ್ಣ, ಎಚ್.ಎಸ್ ರವಿ, ಎಚ್.ಎಸ್ ಕೃಷ್ಣ, ಭುವನಹಳ್ಳಿ ಜಯಣ್ಣ, ಆರ್.ವೆಂಕಟೇಶ್, ಪಿ.ಟಿ ಮಂಜುನಾಥ್, ಕೆ.ಜೆ ದೇವೇಗೌಡ, ಎನ್.ಚಂದ್ರಶೇಖರ್, ಎನ್.ಬಿ ಹರೀಶ್, ಕೆ.ಎಸ್ ರಾಜೇಶ್, ಸ್ವಾಮಿ, ದೊಡ್ಡೇಗೌಡ ಮತ್ತಿತರಿದ್ದರು.