Monday, April 21, 2025
Google search engine

Homeಅಪರಾಧಪಕ್ಕದ ಮನೆಯವರ ಸಮಯ ಪ್ರಜ್ಞೆ: ಚಿನ್ನ ಬಿಟ್ಟು ಬೆಳ್ಳಿಯೊಂದಿಗೆ ಕಳ್ಳರು ಪರಾರಿ

ಪಕ್ಕದ ಮನೆಯವರ ಸಮಯ ಪ್ರಜ್ಞೆ: ಚಿನ್ನ ಬಿಟ್ಟು ಬೆಳ್ಳಿಯೊಂದಿಗೆ ಕಳ್ಳರು ಪರಾರಿ

ನಂಜನಗೂಡು: ಪಕ್ಕದ ಮನೆಯವರ ಸಮಯ ಪ್ರಜ್ಞೆಯಿಂದ ಹೆಚ್ಚಿನ ಪ್ರಮಾಣದ ಕಳುವು ತಪ್ಪಿದಂತಾಗಿದೆ.

ಮನೆ ದೋಚಲು ಬಂದ ಖದೀಮರು ಪಕ್ಕದ ಮನೆಯವರ ಸಮಯ ಪ್ರಜ್ಞೆಯಿಂದಾಗಿ ಚಿನ್ನಾಭರಣ ಬಿಟ್ಟು ಬೆಳ್ಳಿ ಸಮೇತ ಪರಾರಿಯಾಗಿರುವ ಘಟನೆ ನಂಜನಗೂಡಲ್ಲಿ ನಡೆದಿದೆ.

ಬಸವನಗುಡಿಯ ಮನೆಯ ಮಾಲೀಕರು ಬೆಂಗಳೂರಿಗೆ ತೆರಳಿದ್ದ ಸಮಯದಲ್ಲಿ ಬೀಗ ಒಡೆದು ಕಳ್ಳರು ಒಳನುಗ್ಗಿದ್ದಾರೆ. ಕೊಠಡಿಯಲ್ಲಿದ್ದ ಕಬ್ಬಿಣದ ಕಪಾಟನ್ನು ಹಜಾರಕ್ಕೆ ತಂದು ಬಾಗಿಲು ಮೀಟಿ ಸುಮಾರು 2.25 ಕೆಜಿ ಬೆಳ್ಳಿಯನ್ನು ಕದ್ದಿದ್ದಾರೆ . ಕಪಾಟಿನ ಒಳಗಿದ್ದ ಲಾಕರ್ ಓಪನ್ ಮಾಡಲು ಕಳ್ಳರು ಯತ್ನಿಸುತ್ತಿದ್ದಾಗ ಬಂದ ಶಬ್ದಕ್ಕೆ ಪಕ್ಕದ ಮನೆಯವರು ಎಚ್ಚತ್ತು ಹೊರಬಂದು ಕೂಗಿದಾಗ ಕೈಗೆ ಸಿಕ್ಕಿದ ಬೆಳ್ಳಿಯ ಜೊತೆ ಕಳ್ಳರು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಡಿ ವೈ ಎಸ್ ಪಿ ಗೊವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ವೇಳೆಗೆ ಬೆಂಗಳೂರಿನಿಂದ ಆಗಮಿಸಿದ ಮನೆಯವರಿಂದ ಮಾಹಿತಿ ಪಡೆದಾಗ ಕಪಾಟಿನಲ್ಲಿ ೭.೦೦೦ ನಗದು ೩ ಕೇ ಜಿ ಬೆಳ್ಳಿ ಹಾಗೂ ೪೦೦ ಗ್ರಾಂ ಚಿನ್ನ ಇಟ್ಟಿರುವುದಾಗಿ ತಿಳಿಸಿದ್ದಾರೆ. ಸದ್ಯ ಚಿನ್ನ ಬಿಟ್ಟ ಕಳ್ಳರು ಬೆಳ್ಳ ಮಾತ್ರ ಕದ್ದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಡಿವೈಎಸ್ಪಿ ಗೊವಿಂದರಾಜು, ಪಕ್ಕದ ಮನೆಯವರ ಸಮಯ ಪ್ರಜ್ಞೆ ಹಾಗೂ ಧೈರ್ಯದ ವರ್ತನೆ ಚಿನ್ನ ಹಾಗೂ ಹಣವನ್ನು ಉಳಿಸಿದೆ. ಅವರಂತೆ ಎಲ್ಲ ನಾಗರಿಕರೂ ವರ್ತಿಸಿದರೆ ಇಲಾಖೆಯ ಕೆಲಸ ಹಾಗೂ ಕಳ್ಳತನ ಕಡಿಮೆಯಾಗಬಹುದಾಗಿದೆ ಎಂದರು.

ನಾಗರಿಕರು ಮನೆಗಳಿಗೆ ಬಾಗಿಲು ಹಾಕಿ ತೆರಳುವಾಗ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಚಿನ್ನ ಬೆಳ್ಳಿ ಹಾಗೂ ನಗರದನ್ನು ಬ್ಯಾಂಕ್ ಲಾಕರ್ ನಲ್ಲಿ ಭದ್ರ ಪಡಿಸುವ ಮನೊಭಾವ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular