ಮೈಸೂರು: ಮೈಸೂರಿನ ಜೆ.ಎಲ್.ಬಿ.ರಸ್ತೆಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಆವರಣದಲ್ಲಿ ಬೆಳೆದಿದ್ದ ಗಂಧದ ಮರ ಕಳುವಾಗಿದೆ.
ರಾತ್ರೋ ರಾತ್ರಿ ಮರವನ್ನ ಕಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬುಡ ಹಾಗೂ ಕೊಂಬೆಗಳನ್ನ ಬಿಟ್ಟು ಕಾಂಡದ ಭಾಗವನ್ನ ಕಡಿದು ಕದ್ದೊಯ್ದಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.