ಬೆಂಗಳೂರು: ಕರ್ನಾಟಕಕ್ಕೆ ಬಸವ ನಾಡು ಹೆಸರಿಡುವುದರಲ್ಲಿ ತಪ್ಪೇನಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ನಗರದಲ್ಲಿ ಇಂದು ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹಲವರು ಬಸವ ಜಿಲ್ಲೆ ಆಗಲಿ ಎಂದು ಬೇಡಿಕೆ ಇಟ್ಟಿದ್ದಾರೆ. ಟೆಕ್ನಿಕಲ್ ಆಗಿ ಸ್ವಲ್ಪ ತೊಂದರೆ ಇದೆ. ಅದನ್ನು ಸಿಎಂ ಜೊತೆ ಚರ್ಚೆ ಮಾಡಬೇಕಿದೆ. ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಮಾಡುವ ಬೇಡಿಕೆ ಇದೆ. ಬೆಂಗಳೂರು ಮೆಟ್ರೋ, ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕು ಎಂಬುದಿದೆ ಎಂದು ತಿಳಿಸಿದರು.
ಬಸವಣ್ಣನವರು ಜಾಗತಿಕವಾಗಿ ಅನುಭವ ಮಂಟಪ ಕೊಟ್ಟವರು. ಸಾಮಾಜಿಕ ಪರಿಕಲ್ಪನೆಯನ್ನು ಕೊಟ್ಟಂತವರು. ನಾವೇ ಎಷ್ಟೋ ಸಲ ಅಂತೇವೆ ನಮ್ಮ ನಾಡು ಬಸವ ನಾಡು ಆಗಬೇಕು ಅಂತ. ಬಸವ ಸಂಸ್ಕೃತಿ ಆಗಬೇಕು ಎಂಬ ಬೇಡಿಕೆಗಳಿವೆ ಎಂದರು. ಹೆಚ್‌ಡಿಕೆ ಆಣೆ ಪ್ರಮಾಣದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಗ್ರಾಮ ಪಂಚಾಯತಿ ಮಟ್ಟಕ್ಕೆ ರಾಜ್ಯ ರಾಜಕಾರಣ ಹೋಗಿದೆ. ಮೊದಲು ಕುಮಾರಸ್ವಾಮಿ ಹೋಗಿ ಆಣೆ ಮಾಡಲಿ. ಆಮೇಲೆ ಉಳಿದವರು ಮಾಡಲಿ ಎಂದು ಟಾಂಗ್ ನೀಡಿದರು.