ಮಂಡ್ಯ: ಬಿಜೆಪಿಯಿಂದ ಶಾಸಕರಿಗೆ ಮಂತ್ರಿಗಿರಿ, 50 ಕೋಟಿ ಆಫರ್ ಕೊಟ್ಟಿರೋದು ಸತ್ಯ. ಹಳೆ ಮೈಸೂರು ಭಾಗದ ಒಬ್ಬ ಎಂಎಲ್’ಸಿ ಬೆಳಗಾವಿಯ ಮಾಜಿ ಸಚಿವ, ಸಂತೋಷ್, ಗೋಲ್ಡ್ ಫಿಂಚ್ ನಲ್ಲಿ ನಮ್ಮ ಶಾಸಕರನ್ನು ಮೀಟ್ ಮಾಡಿದ್ದಾರೆ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಹೇಳಿದ್ದನ್ನು ಮತ್ತೆ ರಿಪೀಟ್ ಮಾಡಲು ನಂಗೆ ಇಷ್ಟ ಇಲ್ಲ. ಶಾಸಕರನ್ನು ಸೆಳೆಯಲು ಪ್ರಯತ್ನ ಪಡುತ್ತಿರೋದಕ್ಕೆ ಸಾಕ್ಷಿ ಇದೆ. ನಮ್ಮ ಡಿಸಿಎಂ ಸಹ ಹೇಳಿದ್ದಾರೆ, ಮೂರು ಅಲ್ಲ ಇನ್ನೂ ದೊಡ್ಡ ದೊಡ್ಡ ನಾಯಕರು ಇದಾರೆ ಅಂತಾ. ನನ್ನ ಬಳಿ ಇರೋ ಮಾಹಿತಿಯನ್ನು ಸಿಎಂ, ಡಿಸಿಎಂಗೆ ಹೇಳ್ತೀನಿ. ಅವರ ಬಳಿ ಇರುವ ಮಾಹಿತಿ ತೆಗೆದುಕೊಂಡು ಮಾಧ್ಯಮದ ಮುಂದೆ ಬರ್ತಿನಿ ಎಂದು ಹೇಳಿದರು.
ನನಗೆ ಆಫರ್ ನೀಡಲು ಬಂದಿದ್ರೆ ಲೈವ್ ಮಾಡಿ ತೋರಿಸುತ್ತಾ ಇದ್ದೆ. ಸಂತೋಷ್ ಪಕ್ಷಕ್ಕೆ ಕರೆದಿರೋದು ಬೇರೆ ವಿಚಾರ ಅಂತಾ ಹೇಳಿದ್ದಾರೆ. ಪಕ್ಷ ಕರೆದಿರೋದು ನಿಜ ಎಂದು ಅವರೆ ಒಪ್ಪಿಕೊಂಡಿದ್ದಾರೆ. ನಮ್ಮ ಶಾಸಕರ ಬಳಿ ಮಾತಾಡಿ 50 ಕೋಟಿ ಆಫರ್ ಕೊಟ್ಟಿದ್ದಾರೆ. ಬಿಜೆಪಿಗೆ ಬಂದ್ರೆ ಮಂತ್ರಿಗಿರಿ ಕೊಡ್ತೀವಿ ಅಂತಾಲೂ ಹೇಳಿದಾರೆ. ಹಳೆ ಮೈಸೂರು ಭಾಗದ ಒಬ್ಬ ಎಂಎಲ್‌ಸಿ, ಬೆಳಗಾವಿಯ ಮಾಜಿ ಸಚಿವ, ಸಂತೋಷ್ ಗೋಲ್ಡ್ ಫಿಂಚ್‌ನಲ್ಲಿ ನಮ್ಮ ಶಾಸಕರನ್ನು ಮೀಟ್ ಮಾಡಿದಾರೆ ಎಂದು ತಿಳಿಸಿದರು.
ಎಲ್ಲಿ ಏನು ಮಾತಾಡಿದಾರೆ ಎಂಬ ಸಾಕ್ಷಿಯನ್ನು ಅತೀ ಶ್ರೀಘ್ರದಲ್ಲಿ ಬಿಡುಗಡೆ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಕಡೆ ಬಲೆ ಹಾಕಲು ಹೊರಟಿದ್ದಾರೆ. ಸದ್ಯಕ್ಕೆ ಐದು ಜನಕ್ಕೆ ಆಫರ್ ಬಂದಿದೆ. ಒಬ್ಬರ ಮುಂದೆ ಕೂತು ಇನ್ನೊಬ್ಬರಿಗೆ ಸ್ಪೀಕರ್ ಹಾಕಿ ಮಾತಾಡಿದ್ದಾರೆ. ಯಾರಿಗೆ ಆಫರ್ ಕೊಟ್ಟಿದ್ದಾರೆ ಆ ಶಾಸಕರ ಜೊತೆ ಮಾಧ್ಯಮದ ಮುಂದೆ ಬರ್ತಿವಿ. ಬಿಜೆಪಿ ಗಾಳಕ್ಕೆ 50ಅಲ್ಲ 100 ಕೊಟ್ರು ಕಾಂಗ್ರೆಸ್ ಶಾಸಕರು ಬೀಳಲ್ಲ ಎಂದು ಹೇಳಿದರು.
ಸಿಎಂ ಹಂಚಿಕೆ ವಿಚಾರದ ಬಗ್ಗೆ ನಾನು ಮಾತಾಡಿಲ್ಲ. ಮಾಧ್ಯಮದವರು ಪ್ರಶ್ನೆ ಕೇಳಿದಾಗ ನಾನು 136 ಜನ ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ಜೊತೆ ಇದ್ದಾರೆ ಎಂದಿದ್ದೇನೆ. ಸೀಟು ಹಂಚಿಕೆಯಲ್ಲಿ ಹೈಕಮಾಂಡ್ ಏನು ಹೇಳಿದ್ದಾರೆ ಗೊತ್ತಿಲ್ಲ. ಸಿಎಂ ಮಾಡುವಾಗ ಮಾಡೇ ಮಾಡ್ತಾರೆ ಎಂತಾ ನಾನು ಹೇಳಿದ್ದೇನೆ ಅಷ್ಟೇ ಎಂದರು.