ಪಿರಿಯಾಪಟ್ಟಣ: ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಕುಂ ಇ ಅಹಮದ್ ಹೇಳಿದರು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು, ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಿದೆ, ಯಾವುದೇ ಸರ್ಕಾರದ ಯೋಜನೆಗಳು ಕೇವಲ ಒಂದು ಧರ್ಮ ಅಥವಾ ಒಂದು ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ ಎಲ್ಲರಿಗೂ ಅನ್ವಯವಾಗುತ್ತವೆ, ಶಕ್ತಿ ಯೋಜನೆ ರಾಜ್ಯಾದ್ಯಂತ ಯಶಸ್ವಿಯಾಗಲು ಸಾರ್ವಜನಿಕರು ಸಹ ಸಾರಿಗೆ ಇಲಾಖೆ ಸಿಬ್ಬಂದಿಯೊಂದಿಗೆ ಪ್ರಯಾಣದ ಸಂದರ್ಭ ಸೌಜನ್ಯತೆಯಿಂದ ವರ್ತಿಸಿ ಯೋಜನೆ ಸಹಕರಿಸಬೇಕು ಎಂದರು.
ಕೆಪಿಸಿಸಿ ಸದಸ್ಯ ಸಚಿವ ಕೆ.ವೆಂಕಟೇಶ್ ಅವರ ಪುತ್ರ ನಿತಿನ್ ವೆಂಕಟೇಶ್ ಅವರು ಮಾತನಾಡಿ ಚುನಾವಣೆ ಸಂದರ್ಭ ಗ್ಯಾರಂಟಿ ಯೋಜನೆಗಳಲ್ಲಿ ನೀಡಿದ ಭರವಸೆಯಂತೆ ಪ್ರಥಮವಾಗಿ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ, ರಾಜ್ಯದ ಯಾವುದೇ ಊರುಗಳಿಗೆ ಮಹಿಳಾ ಪ್ರಯಾಣಿಕರು ಸಾರಿಗೆ ಇಲಾಖೆ ನಿಗದಿಪಡಿಸಿದ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದ್ದು ಯೋಜನೆ ಸದ್ಬಳಕೆಯಾಗಲಿ ಯಾವುದೇ ಯೋಜನೆ ಜಾರಿ ಸಂದರ್ಭ ಸಣ್ಣ ಪುಟ್ಟ ಗೊಂದಲಗಳಿರುತ್ತವೆ ಅವುಗಳನ್ನು ನಿವಾರಿಸಿ ಯೋಜನೆ ಯಶಸ್ಸಿಗೆ ಸಹಕರಿಸಬೇಕು ಎಂದರು.
ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್ ಅವರು ಶಕ್ತಿ ಯೋಜನೆ ನಿಬಂಧನೆಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರೆಹಮತ್ ಜಾನ್ ಬಾಬು, ಡಿ.ಟಿ ಸ್ವಾಮಿ, ಮುಖಂಡರಾದ ಎಚ್.ಡಿ ಗಣೇಶ್, ಬಿ.ಎಸ್ ರಾಮಚಂದ್ರ ಶಕ್ತಿ ಯೋಜನೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಮಾತನಾಡಿದರು.
ಈ ವೇಳೆ ಶಕ್ತಿ ಯೋಜನೆ ಕಾರ್ಯಕ್ರಮ ಅಂಗವಾಗಿ ವಿವಿಧ ಬಗೆ ಹೂ ಹಾಗೂ ಬಣ್ಣಗಳಿಂದ ಅಲಂಕಾರಗೊಂಡಿದ್ದ ಮೈಸೂರಿಗೆ ತೆರಳುತ್ತಿದ್ದ ಚಾಲಕ ಕಮ್ ನಿರ್ವಾಹಕ ಪ್ರದೀಪ್ ಅವರ ವಾಹನದಲ್ಲಿ ಮಹಿಳಾ ಪ್ರಯಾಣಿಕರಿಗೆ ತಹಶೀಲ್ದಾರ್
ಕುಂ ಇ ಅಹಮದ್ ಟಿಕೆಟ್ ವಿತರಿಸಿ ಸಾರಿಗೆ ವಾಹನಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್, ಪಶು ಇಲಾಖೆ ಸಹಾಯಕ ನಿರ್ದೇಶಕ
ಡಾ.ಸೋಮಯ್ಯ, ಸಾರಿಗೆ ಇಲಾಖೆ ಆಡಳಿತಾಧಿಕಾರಿ ಮಂಜುನಾಥ್, ಪಿರಿಯಾಪಟ್ಟಣ ಸಾರಿಗೆ ಘಟಕ ಪಾರುಪತ್ತೆಗಾರ ಪ್ರಕಾಶ್, ಸಂಚಾರ ನಿರೀಕ್ಷಕ ಪ್ರಕಾಶ್, ಸಂಚಾರ ನಿಯಂತ್ರಣಧಿಕಾರಿಗಳಾದ ಶ್ರೀಧರ್, ಸುರೇಶ್, ಶಿವಕುಮಾರ್, ರಮೇಶ್, ಲೆಕ್ಕಪತ್ರ ಮೇಲ್ವಿಚಾರಕಿ ಭಾಗ್ಯಲಕ್ಷ್ಮಿ, ಚಾಲಕ ನಿರ್ವಾಹಕ ತಾಂತ್ರಿಕ ಹಾಗೂ ಕಚೇರಿ ಸಿಬ್ಬಂದಿ, ಪುರಸಭಾ ಸದಸ್ಯರಾದ ಎಚ್.ಕೆ ಮಂಜುನಾಥ್, ಮಂಜುನಾಥ್ ಸಿಂಗ್, ರತ್ನಮ್ಮ ಪಿ.ಪಿ ಮಹದೇವ್, ರವಿ, ಪಿ.ಸಿ ಕೃಷ್ಣ, ನಿರಂಜನ್, ವಿನೋದ್, ಭಾರತಿ, ಮುಖಂಡರಾದ ಕೆಲ್ಲೂರು ನಾಗರಾಜ್ ವಕೀಲರಾದ ಸುಧೀಶ್, ಬಿ.ವಿ ಜವರೇಗೌಡ, ಮುತ್ತಿನಮುಳಸೋಗೆ ಶಿವಕುಮಾರ್, ಮಲ್ಲಣ್ಣ, ಲೋಹಿತ್, ಅಸ್ವಾಳ್ ಶಫಿ, ರಾಜೇಶ್, ಪುರುಷೋತ್ತಮ್, ಹರೀಶ್ ಸೇರಿದಂತೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.
ಶಿಷ್ಟಾಚಾರ ಉಲ್ಲಂಘನೆ: ಸರ್ಕಾರಿ ಕಾರ್ಯಕ್ರಮವಾಗಿದ್ದರು ವೇದಿಕೆ ತುಂಬಾ ಆಹ್ವಾನ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದ ಮುಖಂಡರು ಕುಳಿತಿದ್ದು ಒಂದು ರೀತಿ ಶಕ್ತಿ ಯೋಜನೆ ಚಾಲನೆ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿ ಮಾರ್ಪಟ್ಟಂತಿತ್ತು, ಸಾರಿಗೆ ಇಲಾಖೆ ಮೇಲಧಿಕಾರಿಗಳಿಗೂ ವೇದಿಕೆಯಲ್ಲಿ ಕುಳಿತುಕೊಳ್ಳಲು ಆಸನಗಳಿರದೆ ಕಾಂಗ್ರೆಸ್ ಪಕ್ಷದ ಮುಖಂಡರೆ ಆವರಿಸಿಕೊಂಡಿದ್ದರು, ಸಾರಿಗೆ ಇಲಾಖೆ ಅಧಿಕಾರಿಗಳು ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದಿಸಿ ವೇದಿಕೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಿದ್ದರು ಸಚಿವರ ಅನುಪಸ್ಥಿತಿಯಲ್ಲಿ ಅವರ ಮಗ ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಅವರನ್ನು ಕಾಂಗ್ರೆಸ್ ಮುಖಂಡರು ಹಿಂಬಾಲಿಸಿ ವೇದಿಕೆಯಲ್ಲಿ ಕುಳಿತಿದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಅವರಿಗೆ ಹೇಳಲಾಗದೆ ಸಂಕೋಚ ಪಟ್ಟಿಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.
ಶಕ್ತಿ ಯೋಜನೆ ಚಾಲನೆ ಅಂಗವಾಗಿ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ವಾಹನ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ಅನ್ನು ತಹಶೀಲ್ದಾರ್ ಕುಂ ಇ ಅಹಮದ್ ವಿತರಿಸಿದರು.