ಗುಂಡ್ಲುಪೇಟೆ: ಪಟ್ಟಣದ ಮಡಹಳ್ಲಿ ರಸ್ತೆಯಲ್ಲಿ ಇರುವ ಅಪ್ಪು ಟೀ ಕ್ಯಾಂಟೀನ್ ಮಾಲೀಕರಾದ ಮಡಹಳ್ಳಿ ನಂದೀಶ್ ರವರು ಪುನಿತ್ ರಾಜ್ ಕುಮಾರ್ ರವರ ೨ ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಅನ್ನದಾನ ಕಾರ್ಯಕ್ರಮ ವನ್ನ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಪಟ್ಟಣದ ವಿವಿಧ ವಾರ್ಡ್ ಹಾಗೂ ತಾಲೂಕಿನ ಅಪ್ಪು ಅಭಿಮಾನಿಗಳು ಪ್ರಸಾದವನ್ನ ಸ್ವೀಕರಿಸಿದರು.ಇದಕ್ಕೂ ಮುನ್ನ ಪುನಿತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಪ್ಪು ಅಭಿಮಾನಿಗಳು ತಮ್ಮ ನಾಯಕನನ್ನು ಸ್ಮರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಲೀಕರಾದ ಮಡಹಳ್ಳಿ ನಂಧೀಶ್,ಪುರಸಭಾ ಸದಸ್ಯರಾದ ರಾಜ್ ಗೋಪಾಲ್, ವೇಣು, ಡೆಕೊರೇಷನ್ ಪಾಂಡು ,ಲೋಕೇಶ್ ಹಾಗೂ ಅಪ್ಪು ಅಭಿಮಾನಿಗಳು ಹಾಜರಿದ್ದರು.