ಮಂಡ್ಯ: ಮಂಡ್ಯದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿರುವ ಹಿನ್ನಲೆ ಕಾವೇರಿ ಹೋರಟಗಾರದಿಂದ ಇಂದು ಸಿ.ಎಂ. ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಇದೆ.
ಮಂಡ್ಯದಲ್ಲಿ ಇಂದು ಅಂತರ್ ಜಿಲ್ಲಾ ಪತ್ರಕರ್ತರ ಸಮ್ಮೇಳನ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
ಈ ಹಿನ್ನಲೆ ಮಂಡ್ಯದ ಸಿಎಂ ಕಾರ್ಯಕ್ರಮಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಪೊಲೀಸರಿಂದ ಕಟ್ಟೆಚ್ಚರ ವಹಿಸಲಾಗಿದೆ.
ಕಾವೇರಿ ವಿಚಾರವಾಗಿ ಜಿಲ್ಲೆಯ ರೈತರಿಗೆ ಸ್ಪಂದಿಸದ ಸಿಎಂಗೆ ಇಂದು ಹೋರಾಟಗಾರರು ಮುತ್ತಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಜಿಲ್ಲಾಡಳಿತ ಹಾಗೂ ಸಚಿವ ಚಲುವರಾಯಸ್ವಾಮಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಮನವೊಲಿಸಲು ಮುಂದಾಗಿದ್ದಾರೆ.