Sunday, April 20, 2025
Google search engine

Homeಅಪರಾಧಮಹಿಳಾ ಪೊಲೀಸ್ ಮುಂದೆಯೇ ಡ್ರ್ಯಾಗರ್ ಹಿಡಿದು ಪುಡಿರೌಡಿಯ ಹುಚ್ಚಾಟ: ಆರೋಪಿ ಬಂಧನ

ಮಹಿಳಾ ಪೊಲೀಸ್ ಮುಂದೆಯೇ ಡ್ರ್ಯಾಗರ್ ಹಿಡಿದು ಪುಡಿರೌಡಿಯ ಹುಚ್ಚಾಟ: ಆರೋಪಿ ಬಂಧನ

ತುಮಕೂರು: ಮಹಿಳಾ ಪೊಲೀಸ್ ಮುಂದೆಯೇ ಡ್ರ್ಯಾಗರ್ ಹಿಡಿದು ಪುಡಿರೌಡಿ ಹುಚ್ಚಾಟ ಮೆರೆದಿದ್ದು, ಪರಿಣಾಮ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು.

ತುಮಕೂರಿನ ಅಶೋಕ ರಸ್ತೆಯ ಖಾಸಗಿ ಬಸ್ ನಿಲ್ದಾಣದ ಬಳಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ಹುಚ್ಚಾಟ ಮೇರೆದ ಪುಡಿರೌಡಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮೋಜಾ@ಮಧು ಪುಂಡಾಟ ಮೆರೆದು ಪೊಲೀಸರ ಅತಿಥಿಯಾದ ಆರೋಪಿ. ಆತನ ಸ್ನೇಹಿತ ಮನೋಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೋಜಾ@ಮಧು, ಇತ್ತೀಚೆಗಷ್ಟೇ ಜೈಲಿನಿಂದ ಜಾಮೀನು ಮೇಲೆ ಹೊರ ಬಂದಿದ್ದ.

ಆರೋಪಿ ಸಾರ್ವಜನಿಕರಿಗೆ ಬೆದರಿಸಿ ಮೊಬೈಲ್ ಕಳ್ಳತನ ಮಾಡಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಯನ್ನ ಹಿಡಿಯಲು ಹೋದ ವೇಳೆ ಎನ್ ಇಪಿಎಸ್ ಠಾಣೆಯ ಮಹಿಳಾ ಪೊಲೀಸ್ ಮಂಗಳಮ್ಮ ಮುಂದೆ ಸುಮಾರು ಅರ್ಧ ಗಂಟೆಗಳ ಕಾಲ ಡ್ರ್ಯಾಗರ್ ಹಿಡಿದು ರಂಪಾಟ ಮಾಡಿದ್ದಾನೆ.

ಹರಸಾಹಸಪಟ್ಟು ಆರೋಪಿಯನ್ನು ಪೊಲೀಸರು ಹಿಡಿದಿದ್ದಾರೆ.

ಆರೋಪಿಗಳ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

RELATED ARTICLES
- Advertisment -
Google search engine

Most Popular