Saturday, April 19, 2025
Google search engine

Homeರಾಜಕೀಯತುಮಕೂರು:  ಸಿದ್ಧತೆಯಿಲ್ಲದೆ ಸಭೆಗೆ ಬಂದ‌ ಅಧಿಕಾರಿಗಳಿಗೆ ಗೃಹ ಸಚಿವ ಜಿ.ಪರಮೇಶ್ವರ್ ಕ್ಲಾಸ್

ತುಮಕೂರು:  ಸಿದ್ಧತೆಯಿಲ್ಲದೆ ಸಭೆಗೆ ಬಂದ‌ ಅಧಿಕಾರಿಗಳಿಗೆ ಗೃಹ ಸಚಿವ ಜಿ.ಪರಮೇಶ್ವರ್ ಕ್ಲಾಸ್

ತುಮಕೂರು: ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದಲ್ಲಿ ನಡೆಯುತ್ತಿರುವ ಜನತಾ ದರ್ಶನ ಸಭೆಗೆ ಸಿದ್ಧತೆಯಿಲ್ಲದೆ ಸಭೆಗೆ ಬಂದ‌ ಅಧಿಕಾರಿಗಳಿಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಭೆಯಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ವಹಣೆಯ ಮಾಹಿತಿಯನ್ನು ಗೃಹ ಸಚಿವರು ಕೇಳಿದ್ದು, ಸರಿಯಾದ ಮಾಹಿತಿ ಒದಗಿಸದ ಕೃಷಿ ಇಲಾಖೆ ಅಧಿಕಾರಿಗಳಿಗೆ ಸಚಿವ ಹಾಗೂ ಶಾಸಕ ಡಾ.ರಂಗನಾಥ್ ಚಳಿ ಬಿಡಿಸಿದ್ದಾರೆ.

ಕುಣಿಗಲ್ ತಾಲ್ಲೂಕಿನಲ್ಲಿ 70 ಸಾವಿರ ನೋಂದಾಯಿತ ರೈತರಿದ್ದಾರೆ. ಕೇವಲ 600 ಜನ ರೈತರು ಮಾತ್ರ ಬೆಳೆ‌ ವಿಮೆಗೆ ನೋಂದಣಿ ಮಾಡಿದ್ದಾರೆ. ಕಳೆದ ವರ್ಷ ಎಷ್ಟು ವಿಮೆ ನೀಡಿದ್ದೀರಾ ಎಂದು ಪರಮೇಶ್ವರ್ ಪ್ರಶ್ನಿಸಿದರು.

ಆದರೆ ಈ ಕುರಿತ ಮಾಹಿತಿ ನೀಡಲು ಅಧಿಕಾರಿಗಳು ತಡಬಡಾಯಿಸಿದ್ದು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ಉಪನಿರ್ದೇಶಕನ, ಸಭೆಯ ಸಿದ್ಧತೆ ಮಾಡದ ಕುಣಿಗಲ್ ತಹಶೀಲ್ದಾರ್ ವಿಶ್ವನಾಥ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾಲಿಡೇಗೆ ಬಂದಂತೆ ಬಂದಿದ್ದೀರಾ ? ಏನು ಅರೇಜ್ ಮೆಂಟ್ ಮಾಡಿದ್ದೀಯಾ ? ಏಯ್ ವಾಟ್ ನಾನ್ಸೆನ್ ಯು ಟಾಕಿಂಗ್ ಎಂದು ಗೃಹ ಸಚಿವ ಜಿ.ಪರಮೇಶ್ವರ್. ಕ್ಲಾಸ್ ತೆಗೆದುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular