Sunday, April 20, 2025
Google search engine

Homeರಾಜ್ಯಸುದ್ದಿಜಾಲಹಣದ ಬದಲು 10 ಕೆಜಿ ಅಕ್ಕಿ ಕೊಡಿ, ಜನತಾ ದರ್ಶನದಲ್ಲಿ ಸಚಿವರಿಗೆ ರೈತ ಮನವಿ

ಹಣದ ಬದಲು 10 ಕೆಜಿ ಅಕ್ಕಿ ಕೊಡಿ, ಜನತಾ ದರ್ಶನದಲ್ಲಿ ಸಚಿವರಿಗೆ ರೈತ ಮನವಿ

ತುಮಕೂರು : ಜಿಲ್ಲಾ ಉಸ್ತುವಾರಿ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಇಂದು ಅ.೩೧ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ಜನತಾ ದರ್ಶನ ನಡೆಸಿದರು. ಈ ವೇಳೆ ಓರ್ವ ರೈತ ನಮಗೆ ಹಣದ ಬದಲು ೧೦ ಕೆಜಿ ಅಕ್ಕಿ ಕೊಡಿ ಎಂದು ಮನವಿ ಮಾಡಿದರು. ಕೇವಲ ಮೂರು ಕೆಜಿ ಕೊಡುತ್ತಾರೆ. ಹೊಟ್ಟೆ ತುಂಬ ಅನ್ನ ಊಟ ಮಾಡೋಕೆ ಆಗುತ್ತಿಲ್ಲ. ದಯವಿಟ್ಟು ನಮಗೆ ಹಣದ ಬದಲು ೧೦ ಕೆಜಿ ಅಕ್ಕಿ ಕೊಡಿ. ಮಕ್ಕಳು ಮರಿ ಎಲ್ಲರು ಹೊಟ್ಟೆ ತುಂಬಾ ಊಟ ಮಾಡುತ್ತಾರೆ. ಇಲ್ಲದಿದ್ದರೆ ಹೊಟ್ಟೆ ಹಸಿವಿನಿಂದ ಇರಬೇಕಾಗುತ್ತೆ ಎಂದು ಮನವಿಮಾಡಿದರು.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹೆಚ್ಚುವರಿ ಐದು ಕೆಜೆ ಅಂದರೆ ಒಟ್ಟು ೧೦ ಕೆಜಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದ್ ನಂತರ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಫಲಾನುಭವಿಗಳ ಅಕೌಂಟ್‌ಗೆ ಐದು ಕೆಜಿ ಅಕ್ಕಿಯ ಹಣವನ್ನು ನೇರ ನಗದು ಪಾವತಿ (ಡಿಬಿಟಿ) ಮೂಲಕ ಪಾವತಿ ಮಾಡಲಾಗುತ್ತಿದೆ ಎಂದರು.

RELATED ARTICLES
- Advertisment -
Google search engine

Most Popular