Sunday, April 20, 2025
Google search engine

Homeರಾಜ್ಯಸುದ್ದಿಜಾಲ67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಲಿಪಿಕಾ.ಡಿ.ಎಂ ಆಯ್ಕೆ

67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಲಿಪಿಕಾ.ಡಿ.ಎಂ ಆಯ್ಕೆ

ಬಳ್ಳಾರಿ: ನಗರದ ಕಾರ್ಕಲತೋಟದ ನಿವಾಸಿ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಲಿಪಿಕಾ.ಡಿ.ಎಂ ಎನ್ನುವ ಬಾಲಕಿ ದೆಹಲಿಯಲ್ಲಿ ನಡೆಯುವ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಸಾಲಿನ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟಗಳು ದೆಹಲಿಯಲ್ಲಿ ನವೆಂಬರ್ ಮೂರನೇಯ ವಾರದಲ್ಲಿ ನಡೆಯಲಿದ್ದು, ಲಿಪಿಕಾ ಅವರು 50 ಮೀ ಫ್ರೀ ಸ್ಟೈಲ್ ಹಾಗೂ 50 ಮೀ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


ಬಳ್ಳಾರಿ ನಗರದ ಕಾರ್ಕಲತೋಟದ ನಿವಾಸಿಗಳಾದ ವಿರೇಶ್.ಡಿ.ಎಂ ಹಾಗೂ ಸುಶೀಲಾ.ಡಿ.ಎಂ ಇವರ ಪುತ್ರಿಯಾದ ಲಿಪಿಕಾ.ಡಿ.ಎಂ ಅವರು, ನಗರದ ಪೊಲೀಸ್ ಕವಾಯತು ಮೈದಾನ ಎದುರಿನ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಎರ್ರಿಸ್ವಾಮಿ ಮತ್ತು ರಜನಿ ಲಕ್ಕ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಲಿಪಿಕಾ ಅವರು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ 40 ಚಿನ್ನದ ಪದಕ, 15 ಬೆಳ್ಳಿ ಪದಕ ಹಾಗೂ 15 ಕಂಚು ಪದಕ ಸೇರಿ 70ಕ್ಕೂ ಹೆಚ್ಚು ಪದಕಗಳನ್ನು ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿ ನಡೆಯುವ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿ, ಈಜು ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಲಿಪಿಕಾ.ಡಿ.ಎಂ ಅವರಿಗೆ ಜಿಲ್ಲಾಡಳಿತದವತಿಯಿಂದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಸಹಾಯಕ ಆಯುಕ್ತ ಹೇಮಂತ್.ಎನ್ ಅವರು ಶುಭ ಹಾರೈಸಿದ್ದಾರೆ.

RELATED ARTICLES
- Advertisment -
Google search engine

Most Popular