ತುಮಕೂರು: ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಜೊತೆ ಕಾರ್ಯಕರ್ತರು ಕುಳಿತ ಘಟನೆ ಹುಲಿಯೂರು ದುರ್ಗದ ಜನತಾ ದರ್ಶನ ಕಾರ್ಯಕ್ರಮದಲ್ಲಿ ನಡೆದಿದೆ.
ವೇದಿಕೆಯ ಮೇಲೆ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಬದಲು ಕಾರ್ಯಕರ್ತರು ಮೊದಲ ಸಾಲಲ್ಲಿ ಕುಳಿತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ಯಕರ್ತರಾದ ತಾಲೂಕು ಕಾಂಗ್ರೆಸ್ ಅಧ್ಯಕ್ಷೆ ಸುಮತಿ, ಹೋಬಳಿ ಅಧ್ಯಕ್ಷ ವೆಂಕಟರಮಣ, ಕಾಂಗ್ರೆಸ್ ಮುಖಂಡ ಗಂಗಶಾನಯ್ಯ ವೇದಿಕೆಯ ಮೇಲೆ ಜನಪ್ರತಿನಿದಿಗಳಂತೆ ಪೋಸ್ ನೀಡಿದ್ದಾರೆ.