ಮೈಸೂರು: ಆರೋಗ್ಯವಾಗಿದ್ದ ನಾಲ್ಕು ಹಸುಗಳು ಪಶು ಆಹಾರ ಸೇವಿಸಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ರೈತ ಜಯಕೃಷ್ಣನಿಗೆ ಸೇರಿದ ಸುಮಾರು ೩ಲಕ್ಷ ಮೌಲ್ಯದ ನಾಲ್ಕು ಹಸುಗಳು ಮೃತಪಟ್ಟಿವೆ. ಹಸುಗಳು ಸಧ್ರಡವಾಗಿ ಬೆಳೆಯಲಿ ಎಂದು ಕುಟುಂಬಸ್ಥರು ಪಶು ಆಹಾರ ನೀಡಿದ್ದರು. ಪಶು ಆಹಾರ ಸೇವಿಸಿದ್ದ ಕೂಡಲೇ ತೀವೃ ಅಸ್ವಸ್ಥವಾದ ನಾಲ್ಕು ಹಸುಗಳು ಅಸ್ವಸ್ಥವಾದ ಕೆಲವೇ ಹೊತ್ತಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿವೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.