Tuesday, April 22, 2025
Google search engine

Homeರಾಜ್ಯಸುದ್ದಿಜಾಲಮೈಸೂರು ದಸರಾ ಮಹೋತ್ಸವ ೨೦೨೩ : ಚಾಮರಾಜನಗರ ಮಹದೇಶ್ವರನ ಸ್ತಬ್ಧ ಚಿತ್ರಕ್ಕೆ ಮೂರನೇ ಸ್ಥಾನ

ಮೈಸೂರು ದಸರಾ ಮಹೋತ್ಸವ ೨೦೨೩ : ಚಾಮರಾಜನಗರ ಮಹದೇಶ್ವರನ ಸ್ತಬ್ಧ ಚಿತ್ರಕ್ಕೆ ಮೂರನೇ ಸ್ಥಾನ

ಚಾಮರಾಜನಗರ: ದಸರಾ ಮಹೋತ್ಸವ ೨೦೨೩ ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರ ಆಕರ್ಷಣೀಯ ಮೆರವಣಿಗೆಯಲ್ಲಿ ಎಲ್ಲಾ ಜಿಲ್ಲೆಗಳ ಸ್ಥಾಪಿಸಿದ ಚಿತ್ರಗಳು ಪಾಲ್ಗೊಂಡಿದ್ದವು. ಜಂಬುಸವಾರಿಯಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ ಪ್ರವಾಸಿಗರಿಗೆ ಹಾಗೂ ದಸರಾ ವೀಕ್ಷಣೆ ಮಾಡುತ್ತಿದ್ದ ಜನರಿಗೆ ಬಹಳ ಆಕರ್ಷಣೆಯಾಗಿ ಮೂಡಿ ಬಂದಿದೆ.

ಅದರ ಪೈಕಿ ಚಾಮರಾಜನಗರ ಜಿಲ್ಲೆಯ ಸ್ತಬ್ಧ ಚಿತ್ರಕ್ಕೆ ಮೂರನೇ ಸ್ಥಾನ ದೊರಕಿದೆ. ಈ ಸ್ತಬ್ದ ಚಿತ್ರವನ್ನು ನಮ್ಮ ಚಾಮರಾಜನಗರ ಜಿಲ್ಲೆಯ ಮಹದೇವ (ಮಂಗಲ) ಮತ್ತು ಚಿತ್ರ ಕಲಾವಿದರಾದ ಮಧುಸೂದನ್ ಹೊಸೂರು, ಕೋಲು ಮಹೇಶ್ (ದೊಡ್ಡರಾಯ ಪೇಟೆ) ರವರು ತಯಾರು ಮಾಡಿದ್ದರು. ನಮ್ಮ ಸ್ತಬ್ಧ ಚಿತ್ರವು ಗೊರವರ ಕುಣಿತದ ವೇಷದ ವ್ಯಕ್ತಿಯ ಭಾವಚಿತ್ರ ಹಾಗೂ ನಮ್ಮ ಜಿಲ್ಲೆಯ ಅರಣ್ಯ ಸಂಪತ್ತು, ಪ್ರಾಣಿಗಳು ಮತ್ತು ಶ್ರೀ ಮಲೆ ಮಹದೇಶ್ವರ ಬೆಟ್ಟದ ೧೦೮ ಅಡಿ ಮಹದೇಶ್ವರ ಮೂರ್ತಿಯನ್ನು ಸ್ತಬ್ಧ ಚಿತ್ರದಲ್ಲಿ ಪ್ರದರ್ಶಿಸಲಾಗಿತ್ತು.

ಈ ಸ್ತಬ್ಧ ಚಿತ್ರ ತಯಾರಿಸಲು ಚಾಮರಾಜನಗರದ ಕಲಾವಿದರ ಶ್ರಮ ನಿಯೋಜಿತ ಅಧಿಕಾರಿಗಳ ಶಿಸ್ತಿನ ಶ್ರಮದಿಂದ ಪ್ರಶಸ್ತಿ ಮೂಡಿ ಬಂದಿದೆ, ಚಾಮರಾಜನಗರ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆಯ ಪರವಾಗಿ ದಸರಾ ಉಪ ಸಮಿತಿ ಹಾಗೂ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

RELATED ARTICLES
- Advertisment -
Google search engine

Most Popular