Monday, April 21, 2025
Google search engine

Homeರಾಜ್ಯಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಆಚರಣೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಆಚರಣೆ

ಚಾಮರಾಜನಗರ: ಭಾರತದ ಪ್ರಪ್ರಥಮ ಉಪ ಪ್ರಧಾನಿಗಳು ಹಾಗೂ ಗೃಹ ಸಚಿವರಾಗಿ ಭಾರತ ಒಕ್ಕೂಟದ ರೂವಾರಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ, ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮ ಅಮಚವಾಡಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಿತು.

ಪ್ರಾಚಾರ್ಯರಾದ ಶಿವನಂಜಪ್ಪ ಮಾತನಾಡಿ, ಭಾರತದ ಸ್ವಾತಂತ್ರ್ಯ ನಂತರ ನೂರಾರು ಸಂಸ್ಥಾನಗಳನ್ನು ಒಂದುಗೂಡಿಸಿ ಭಾರತವನ್ನು ಒಕ್ಕೂಟ ವ್ಯವಸ್ಥೆಯನ್ನು ನಿರ್ಮಿಸಿದ ಮಹಾನ್ ವ್ಯಕ್ತಿ . ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರು. ಉಪ ಪ್ರಧಾನಿಗಳಾಗಿ, ಗೃಹ ಸಚಿವರಾಗಿ ಉತ್ತಮ ಆಡಳಿತವನ್ನು ನಡೆಸಿದವರು ಎಂದು ತಿಳಿಸಿ ರಾಷ್ಟ್ರೀಯ ಭಾವೈಕ್ಯತೆಯ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ ಎಂದರು.

ರಾಷ್ಟ್ರೀಯ ಪ್ರತಿಜ್ಞಾ ದಿವಸದ ಪ್ರತಿಜ್ಞೆಯನ್ನು ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ನೆರವೇರಿಸಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಹಿರಿಯ ಉಪನ್ಯಾಸಕರಾದ ಆರ್ ಮೂರ್ತಿ, ಶಿವ ಸ್ವಾಮಿ, ಶ್ರೀಕಂಠ ನಾಯಕ, ಬಸವಣ್ಣ, ರಮೇಶ್ ಸುರೇಶ್  ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular