ಮೈಸೂರು: ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆ, ಲಯನ್ಸ್ ಕ್ಲಬ್ ಆಫ್ ಮೈಸೂರು ವಿಶ್ವಮಾನವ ಕುವೆಂಪು ಸಹಯೋಗದಲ್ಲಿ ದಿ. ಶ್ರೀಯುತ ಪಟೇಲ್ ಎನ್ಎನ್ ಪುಟ್ಟಸ್ವಾಮಿಗೌಡರ ಸ್ಮರಣಾರ್ಥ ವಾಕ್ (ಮಾತು) ಮತ್ತು ಶ್ರವಣ(ಕಿವಿ) ದೋಷವಿರುವವರಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಶ್ರೀ ಸೋಮೇಶ್ವರ ದೇವಸ್ಥಾನದ ಆವರಣ, ನೇರಳಕೆರೆ, ಶ್ರೀರಂಗಪಟ್ಟಣ ತಾಲೂಕು ಮಂಡ್ಯ ಜಿಲ್ಲೆ ರಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಎ.ಬಿ ರಮೇಶ್ ಬಾಬು ಬಂಡಿಸಿದ್ದೇಗೌಡರು, ಶಾಸಕರು ಶ್ರೀರಂಗಪಟ್ಟಣ ಕ್ಷೇತ್ರ ರವರು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಲಯನ್ ಕೆ.ಎಲ್ ರಾಜಶೇಖರ್, ಎನ್.ಪಿ ಸುರೇಶ್, ಶ್ರೀ ಸಿ. ರಮೇಶ್ , ಶ್ರೀಮತಿ ನಾಗಮ್ಮ ಪಾಲ್ಗೊಂಡಿದ್ದರು .