ಹೆಚ್.ಡಿ.ಕೋಟೆ: ಧ್ವನಿ ಇಲ್ಲದವರ, ರೈತರ ಪರವಾಗಿ ನಿಲ್ಲಬೇಕಾದದ್ದು ನಮ್ಮೆಲ್ಲರ ಜವಬ್ದಾರಿ ಎಂದು ಪ್ರತಿಭೆ ಮತ್ತು ಅಜಿಮ್ ಪ್ರೇಮ್ ಜಿ ಸಂಸ್ಥೆಯ ನಿರ್ದೇಶಕ ಪ್ರಸನ್ನಮೂರ್ತಿ ತಿಳಿಸಿದರು.
ಹ್ಯಾಂಡ್ ಪೋಸ್ಟ್’ನ ಮೈರಾಡ ಪ್ಲಾನ್ ನಲ್ಲಿ ನಡೆದ ಪ್ರತಿಭೆ ಮತ್ತು ಅಜಿಮ್ ಪ್ರೇಮ್ ಜಿ ಸಂಸ್ಥೆಯ ಆಶ್ರಯದಲ್ಲಿ ಬಗರ್ ಹುಕುಂ ಸಾಗುವಳಿ ರೈತ ಪರವಾದ ಮುಖಂಡರ ವಕಾಲತ್ತು ಕುರಿತಾದ ಕಾರ್ಯಗಾರ ನಡೆಯಿತು.
ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದಿಂದ ಶಿಕಾರಿ ಪುರದವರೆಗೆ ರೈತರ ಜೊತೆಗೂಡಿ ಮೂರು ದಿನ ಪಾದಯಾತ್ರೆ ಮಾಡಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದೆವು. ಈಗಾಗಲೇ ಬಗರ್ ಹುಕುಂ ಸಾಗುವಳಿಗಾಗಿ ಈ ಕ್ಷೇತ್ರದಲ್ಲಿ ರೈತರು 50 53 57 ರಲ್ಲಿ ಅರ್ಜಿ ಸಲ್ಲಿಸಿದ್ದು ಸಾಗುವಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಆದರೆ ಸಾಗುವಳಿ ಪತ್ರ ರೈತರ ಕೈ ಸೇರಿಲ್ಲ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ರೈತರು ದಿನನಿತ್ಯ ಕಛೇರಿಗೆ ಅಲೆಯುವ ಪರಿಸ್ಥಿತಿ ಇದೆ. ಈ ವಿಚಾರವಾಗಿ ಪತ್ರಿಕೆಗಳು ಜಾಗರೂಕತೆ ವರದಿಗಳನ್ನು ಬಿತ್ತರಿಸಿ ಚುನಾಯಿತ ಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳನ್ನು ಪ್ರಶ್ನಿಸುವ ಧೈರ್ಯ ರೈತರಿಗಿಲ್ಲದಾಗಿದೆ. ಹೀಗಿರುವಾಗ ಧ್ವನಿ ಇಲ್ಲದವರ ರೈತರ ಪರವಾಗಿ ನಿಲ್ಲಬೇಕಾದದ್ದು ನಮ್ಮೆಲ್ಲರ ಜವಬ್ದಾರಿ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹೋರಾಟಗಳನ್ನು ರೂಪಿಸುವ ಮೂಲಕ ನೊಂದ ರೈತರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಸಂಘಟನೆಗಳು, ಸಂಸ್ಥೆಗಳು ಮಾಡಬೇಕು ಎಂದು ಮಾತನಾಡಿದರು.
ಸಂಸ್ಥೆಯ ಸಿಬ್ಬಂದಿಗಳಾದ ಶಿವರಾಜು, ಗೋಪಾಲರಾಜು, ಸುಶೀಲ, ಮಾರ್ಸಲಿನ್ ಹಾಗೂ ತಾಲೋಕು ಮಟ್ಟದ ಮುಖಂಡರುಗಳಾದ ಜೆ ಪಿ ನಾಗರಾಜು, ಕಾಳೆಗೌಡರು, ಜೀವಿಕ ಬಸವರಾಜು, ಅಕ್ಬರ್ ಪಾಷ, ಸುರೇಂದ್ರ ಮೂರ್ತಿ, ಶಿವಲಿಂಗು, ಶೈಲಾ ಸುಧಾ ಮಣಿ, ಅನುಷಾ, ಬಿ. ಕೆ ಮಹೇಶ್, ನವೀನ್ ಗೌಡ, ಕಾಳಿಂಗೆಗೌಡ, ಮಹೇಂದ್ರ, ಪಾಪಣ್ಣ, ತಿಮ್ಮಶೆಟ್ಟಿ ಎಲ್ಲಾ ರೈತ ಮುಖಂಡರುಗಳು ಭಾಗವಹಿಸಿದ್ದರು.