ಕೆ.ಆರ್.ನಗರ: ತಾಲೂಕು ಆಡಳಿತ ನಗರದ ರೇಡಿಯೋ ಮೈದಾನದಲ್ಲಿ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಡಿ ರವಿಶಂಕರ್ ಉದ್ಘಾಟಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ಎಲ್ಲಾ ಶಾಲಾ ಮಕ್ಕಳಿಂದ ಕೆ ಆರ್ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನೆ ಮಾಡಿ ಹಾಗೂ ವಿವಿಧ ಇಲಾಖೆಗಳಿಂದ ಸ್ತಬ್ಧ ಚಿತ್ರಗಳು ಸಾಗಿದವು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಿ ರವಿಶಂಕರ್, ತವರು ಪ್ರತಿ ಮನೆ ಮನೆಯಲ್ಲಿ ಮೊದಲು ಕನ್ನಡದಲ್ಲೇ ಮಾತನಾಡುವ ಮೂಲಕ ನಮ್ಮ ಭಾಷೆಗೆ ಪ್ರಾಮುಖ್ಯತೆ ನೀಡಬೇಕು. ನಾವು ವ್ಯವಹಾರಿಕವಾಗಿಯೂ ಸಹ ಕನ್ನಡವನ್ನೇ ಬಳಸಿ ಇತರರಿಗೂ ಕನ್ನಡ ಬಳಸಲು ಮನವರಿಕೆ ಮಾಡಿಕೊಡಬೇಕು ಎಂದರು.
ನಮ್ಮ ಕನ್ನಡ ನುಡಿಗಾಗಿ ನಾವುಗಳೇ ಹೋರಾಡಬೇಕಾಗಿರುವುದು ನಮ್ಮಗಳ ದೌರ್ಭಾಗ್ಯ ಎಂದು ನಮ್ಮ ಕನ್ನಡದ ಬಗ್ಗೆ ನಮಗೆ ಮೊದಲು ಗೌರವಿರಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.
