Tuesday, April 8, 2025
Google search engine

Homeಅಪರಾಧಆಟೋ ಬಾಡಿಗೆ ವಿಚಾರಕ್ಕೆ ಜಗಳ : ಓರ್ವನ ಕೊಲೆ, ಮತ್ತೋರ್ವನಿಗೆ ಗಂಭೀರ ಗಾಯ

ಆಟೋ ಬಾಡಿಗೆ ವಿಚಾರಕ್ಕೆ ಜಗಳ : ಓರ್ವನ ಕೊಲೆ, ಮತ್ತೋರ್ವನಿಗೆ ಗಂಭೀರ ಗಾಯ

ಬೆಂಗಳೂರು: ಆಟೋ ಬಾಡಿಗೆ ವಿಚಾರಕ್ಕೆ ಆಟೋ ಚಾಲಕ ಅಶ್ವಥ್ ಎನ್ನುವಾತ ಇಬ್ಬರು ಪ್ರಯಾಣಿಕರ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ಮಾಡಿದ್ದು, ಹಲ್ಲೆಯಿಂದಾಗಿ ಓರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಯಶವಂತಪುರದ ಸೋಫ್ ಫ್ಯಾಕ್ಟರಿ ಬಳಿ ಭಾನುವಾರ ರಾತ್ರಿ ನಡೆದಿದೆ.

ಅಸ್ಸಾಂ ಮೂಲದ ಅಹ್ಮದ್ (28) ಕೊಲೆಯಾದ ಯುವಕ. ಮತ್ತೊಬ್ಬ ಯುವಕ ಅಯೂಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೃತ ಅಹ್ಮದ್ ಮತ್ತು ಗಾಯಗೊಂಡಿರುವ ಅಯೂಬ್ ಇಬ್ಬರು ಸಹೋದರರು. ಇವರಿಬ್ಬರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಯಶವಂತಪುರದಲ್ಲಿ ವಾಸವಿದ್ದರು. ಎಂದಿನಂತೆ ನಿನ್ನೆ ರಾತ್ರಿ ಕೆಲಸ ಮುಗಿಸಿ ಆಟೋ ಹಿಡಿದು ಮನೆಗೆ ಹೊರಟ್ಟಿದ್ದಾರೆ. ಆಟೋ ಹತ್ತಿಸಿಕೊಂಡು ಚಾಲಕ, ಡಬಲ್ ಬಾಡಿಗೆ ಕೇಳಿದ್ದಾನೆ.

ಈ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ಆಟೋ ಚಾಲಕ ಮಾರಾಕಾಸ್ತ್ರಗಳಿಂದ ಸಹೋದರರ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಅಹ್ಮದ್ ಮೃತಪಟ್ಟಿದ್ದು, ಅಯೂಬ್ ಗಂಭೀರ ಗಾಯಗಳಾಗಿವೆ. ಈ ಬಗ್ಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular