ಮೈಸೂರು: ವಿಜಯನಗರ ೨ನೇ ಹಂತದಲ್ಲಿರುವ ಸಮರ್ಥನಂ ಬುದ್ಧಿ ವಿಶೇಷ ಶಾಲೆಯ ಆವರಣದಲ್ಲಿ ವಿಶೇಷ ಮಕ್ಕಳಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸದರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಖ್ಯಾತ ವೈದ್ಯರು ಹಾಗೂ ಶಸ್ತ್ರ ಚಿಕಿತ್ಸಕರೂ ಆದ ಡಾ. ಅಮೀರ್ ಅಹಮದ್, ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವನ್ನು ಪ್ರತಿ ವರ್ಷ ನವೆಂಬರ್ ೧ ರಂದು ನಾಡಹಬ್ಬದಂತೆ ಸಂತೋ?ದಿಂದ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸಾಧು-ಸಂತರು-ದಾಸರು- ಶಿವಶರಣರು – ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ ಎಂದು ತಿಳಿಸಿದರು.
ಕನ್ನಡದ ಕುಲಪುರೋಹಿತ ಎಂದು ಬಿರುದು ಪಡೆದ ಆಲೂರು ವೆಂಕಟರಾವ್ ಅವರು ೧೯೦೫ ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು. ೧೯೫೦ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾ?ಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು. ಮೈಸೂರು ರಾಜ್ಯವು ಬಳಿಕ ಕರ್ನಾಟಕ ಎಂಬ ಹೆಸರು ಪಡೆಯಿತು ಎಂದು ಕರ್ನಾಟಕದ ಇತಿಹಾಸ ತಿಳಿಸಿಕೊಟ್ಟರು.
ವಿಶೇಷ ವಿದ್ಯಾರ್ಥಿನಿ ದೀಪು ಸ್ವಾಗತಿಸಿದರೆ, ಸಲ್ಮಾ ನಿರೂಪಿಸಿದರು ಹಾಗೂ ದರ್ಶಿನಿ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು, ದೃಷ್ಠಿ ವಿಶೇಷ ವಿದ್ಯಾರ್ಥಿನಿ ನಿತ್ಯ ಭವನೇಶ್ವರಿಯ ವೇಷಭೂಷಣ ತೊಟ್ಟು ಗಮನ ಸೇಳೆದರು. ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಭ್ರಮಾರಂಬ, ವಿಶೇಷ ಶಿಕ್ಷಕಿರಾದ ಪಿ. ಪದ್ಮ, ಹೆಚ್.ವಿದ್ಯಾವತಿ, ಬೃಂದಾ ಬಾಯಿ, ಸಿಬ್ಬಂದಿಗಳಾದ ಕೆ.ಎನ್. ರವಿ, ರಾಘವೇಂದ್ರ ಮತ್ತು ಪವಿತ್ರ ಸೇರಿದಂತೆ ಮೊದಲಾದವರು ಇದ್ದರು. ಮಾಹಿತಿಗಾಗಿ, ೬೩೬೪೮೬೭೮೧೮, ೮೧೨೩೭೨೫೯೪೯