Monday, April 21, 2025
Google search engine

Homeರಾಜ್ಯಸುದ್ದಿಜಾಲಪೋಷಕರು, ಶಿಕ್ಷಕರು ಮಕ್ಕಳಲ್ಲಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಶಾಸಕ ಅನಿಲ್ ಚಿಕ್ಕಮಾದು

ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಶಾಸಕ ಅನಿಲ್ ಚಿಕ್ಕಮಾದು

ಹೆಚ್.ಡಿ.ಕೋಟೆ : ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ೬೮ ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿದರು.

ಇಡೀ ಏಷ್ಯಾ ಖಂಡದಲ್ಲೇ ಹೆಗ್ಗಡದೇವನಕೋಟೆ ತಾಲ್ಲೂಕು ಅತಿ ಹೆಚ್ಚು ಅರಣ್ಯ ಸಂಪತ್ತು ಹೊಂದಿರುವ ತಾಲ್ಲೂಕಾಗಿದ್ದು, ಇಲ್ಲಿ ಜನಿಸಿದ ನಾವೇ ಪುಣ್ಯವಂತರು. ವಿಶೇಷವಾಗಿ ಕಬಿನಿ, ತಾರಕ, ನುಗು ಹಾಗೂ ಹೆಬ್ಬಾಳ ನಾಲ್ಕು ಜಲಾಶಗಳಿವೆ. ಈ ತಾಲೂಕಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತಿದ್ದು, ಹೆಗ್ಗಡದೇವನಕೋಟೆ ತಾಲ್ಲೂಕು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಹತ್ತಿರದಲ್ಲಿರುವ ನಮ್ಮ ತಾಲ್ಲೂಕನ್ನು ಪ್ರವಾಸಿ ತಾಣವಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದರು. ತಾಲೂಕಿನಲ್ಲಿ ಹಲವಾರು ರೀತಿಯ ಪ್ರತಿಭೆಗಳಿದ್ದು, ಆ ಪ್ರತಿಭೆಗೆ ವೇದಿಕೆ ನಿರ್ಮಿಸಲು ಕಲಾಮಂದಿರ ಅವಶ್ಯಕತೆಯಿದ್ದು, ಶೀಘ್ರದಲ್ಲೇ ಕಲಾಮಂದಿರವನ್ನು ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪ್ರತಿಭೆಗಳಿಗೆ ನೆರವಾಗಲು ತಾಲೂಕಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ೧೫೦೦ ಸಾವಿರ ಜನರು ಕೂತು ನೋಡುವ ಕಲಾ ಮಂದಿರವನ್ನು ನಿರ್ಮಾಣ ಮಾಡಲು ತಹಶೀಲ್ದಾರ್ ಮತ್ತು ಮುಖ್ಯಧಿಕಾರಿಗಳು ಜಾಗವನ್ನು ಗುರುತಿಸುವಂತೆ ಸೂಚಿಸಿದರು. ಶಾಲೆಯ ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ ಮಕ್ಕಳ ಪ್ರತಿಭೆಯನ್ನು ಹೊರ ತರುವಂತೆ ತಿಳಿಸಿದರು
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕೃಪಾ ಗಣೇಶ್ ಮುಖ್ಯ ಭಾಷಣಕರರಾಗಿ ಮಾತನಾಡಿ
ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು ಒಂದೆಡೆ ಸೇರಿಸುವ ಕೆಲಸವನ್ನು ಜನವರಿ ೨೬.೧೯೫೦ ರಂದು ಅಂಬೇಡ್ಕರ್ ರವರು ಮಾಡಿದರು. ಮೈಸೂರು ರಾಜ್ಯದ ಹೆಸರನ್ನು ೧೯೭೩ ರಲ್ಲಿ ಡಿ. ದೇವರಾಜ್ ಅರಸ್ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಲಾಯಿತು ಇಂದಿಗೆ ೫೦ ವರ್ಷ ಪೂರೈಸಿದ ಇತಿಹಾಸ ಹೊಸ ಅಧ್ಯಾಯ ಮತ್ತು ಮಹನೀಯರನ್ನು ಸ್ಮರಿಸಿದರು ಕರ್ನಾಟಕವನ್ನು ಹಲವಾರು ರಾಜ ಮನೆತನೆಗಳು ಆಳಿವೆ ಕನ್ನಡ ಧ್ವಜವು ಹಳದಿ ಕೆಂಪು ಬಣ್ಣವನ್ನು ಹೊಂದಿದ್ದು ಹೊರಗಡೆಯಿಂದ ಬಂದತಹ ಜನರಿಗೆ ಅನ್ನ ನೀರು ನೀಡುವ ಉದರವಾದ ನಾಡು ಎಂದು ತಿಳಿಸಿದರು.

ಐ.ಟಿ, ಬಿ.ಟಿ ಯಲ್ಲೂ ೩ ನೇ ಅತಿ ದೊಡ್ಡರಾಜ್ಯ ಹೆಗ್ಗಳಿಕೆ ನಮ್ಮದಾಗಿದೆ, ಮಹಿಳೆಯರನ್ನು ಗೌರವಿಸುವ ನಾಡಿನಲ್ಲಿ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಮಹಿಳೆಯರಲ್ಲಿ ಶಕ್ತಿಯನ್ನು ತಂದಿದೆ ಎಂದರು. ಕಾರ್ಯಕ್ರಮ ಮೊದಲಿಗೆ ಕೋಟೆ ಪಟ್ಟಣದ ವರದರಾಜಸ್ವಾಮಿ ದೇವಸ್ಥಾನದಿಂದ ನಂದಿಕಂಬ ವಿವಿಧ ಸ್ತಬ್ದ ಚಿತ್ರಗಳೊಂದಿಗೆ ಮಕ್ಕಳ ಮೆರವಣಿಗೆ ಮೂಲಕ ವೇದಿಕೆಯನ್ನು ತಲುಪಿತು ಕನ್ನಡಪರ ಸಂಘಟನೆಗಳು, ಆಟೋಚಾಲಕರ ಸಂಘ, ಸ್ತ್ರೀಶಕ್ತಿ ಸಂಘ ಸೇರಿದಂತೆ ಹಲವು ಸಂಘಟನೆಗಳು ಮೆರವಣಿಗೆಗೆ ಸಾತ್ ನೀಡಿದವು.

ಸಾಂಸ್ಕೃತಿಕ ಕಾರ್ಯಕ್ರಮ : ಸೆಂಟ್ ಮೇರಿಸ್ ಶಾಲೆಯ ಮಕ್ಕಳಿಂದ ಭರತ ನಾಟ್ಯ, ಸೆಂಟ್ ಜೋಸೆಫ್ ಶಾಲೆಯಿಂದ ಕನ್ನಡಾಂ ಭೆಯ ಗೀತೆ, ಸಿದ್ದಪ್ಪಾಜಿ ರಸ್ತೆ ಅಂಗನವಾಡಿ ಮಕ್ಕಳಿಂದ ಮಹದೇಶ್ವರ ಗೀತೆ, ಆದಿ ಚುಂಚನಗಿರಿ ಶಾಲೆಯ ಮಕ್ಕಳಿಂದ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ನೃತ್ಯ, ಇನ್ನೂ ಹಲವು ನೃತ್ಯಗಳು ಮಾಡಿ ಕಾರ್ಯಕ್ರಮಕ್ಕ ಮೆರಗು ತಂದವು. ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಹೆಚ್.ಸಿ. ನರಸಿಂಹಮೂರ್ತಿ, ತಹಶೀಲ್ದಾರ್ ಸಣ್ಣರಾಮಪ್ಪ, ಆರಕ್ಷಕ ಉಪನಿರೀಕ್ಷಕ ಸಬ್ಬೀರ್ ಹುಸೇನ್, ಕಾರ್ಯನಿರ್ವಾಹಕ ಅಧಿಕಾರಿ ಧರಣೇಶ್, ಪುರಸಭೆ ಮುಖ್ಯ ಅಧಿಕಾರಿ ಸುರೇಶ್ ಪುರಸಭಾ ಸದಸ್ಯರಾದ ಮಧು, ಪ್ರೇಮ್‌ಸಾಗರ್, ಕನ್ನಡ ಪ್ರಮೋದ್, ಉಪ ತಹಶಿಲ್ದಾರ್ ಯೋಗೇಂದ್ರ, ಯುವ ಘಟಕ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಛಾಯಾಗ್ರಾಹಕ ಸಂಘದ ಅಧ್ಯಕ್ಷ ಬಾಲುಸುಬ್ರಹ್ಮಣ್ಯ, ವನಸಿರಿ ಶಂಕರ್ ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular