Monday, April 21, 2025
Google search engine

Homeಸ್ಥಳೀಯಮೈಸೂರು: ಕುಂಚಿಟಿಗರ ಸಂಘದ ಅಧ್ಯಕ್ಷರಾಗಿ ಸಿ ಕೆ ಗಣೇಶ್ ಅವಿರೋಧ ಆಯ್ಕೆ

ಮೈಸೂರು: ಕುಂಚಿಟಿಗರ ಸಂಘದ ಅಧ್ಯಕ್ಷರಾಗಿ ಸಿ ಕೆ ಗಣೇಶ್ ಅವಿರೋಧ ಆಯ್ಕೆ

ಮೈಸೂರು:  ಕುಂಚಿಟಿಗರ ಸಂಘದ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ, ಉದ್ಯಮಿ ಸಿ ಕೆ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಿ ಕೆ ಗಣೇಶ್, ಹಾಗೂ ಅವರ ತಂಡದ ೧೮ ಮಂದಿ ಪದಾಧಿಕಾರಿಗಳು  ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿರುವ ಗಣೇಶ್, ಮುಂಬರುವ ದಿನಗಳಲ್ಲಿ, ಸಂಘಟನೆ, ಹಾಗು ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಸಮಾಜದ ಸರ್ವರ  ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಒತ್ತುಕೊಡುವ ಅಗತ್ಯವಿದ್ದು, ಅದಕ್ಕೆ ತಾವು ನೂತನ ಯೋಜನೆಗಳನ್ನು  ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಸಂಘದ ಉಪಾಧ್ಯಕ್ಷ-ಪಿ.ಶಿವಕುಮಾರ್, ಕಾರ್ಯದರ್ಶಿ ಸಿ. ಲೋಕೇಶ್, ಖಜಾಂಚಿ ಎಸ್.ಸುರೇಶ್, ಸ್ಥಳೀಯ ಕಾರ್ಯಕಾರಿ ಮಹಿಳಾ ಮೀಸಲಾತಿಯಲ್ಲಿ ಎಂ ಜೆ ಶಶಿಕಲಾ ಆಯ್ಕೆಯಾಗಿದ್ದಾರೆ. 

ಪರಿಷತ್ತಿನ ಸದಸ್ಯರಾಗಿ ಆರ್ ಸತೀಶ್, ಆರ್. ಉಮೇಶ್, ಬಿ.ಗಿರೀಶ್, ಎಂ ಎನ್.ಚಿದಾನಂದ, ಪಿ. ಉದಯಕುಮಾರ್, ಎಸ್. ಚಂದ್ರಶೇಖರ್, ಆರ್.ಚಂದ್ರು, ಜಿ.ಮಂಜುನಾಥ್ , ಎಂ ಕೆ.ರವಿ, ಸಿ.ಆರ್. ಲೋಕೇಶ್. ಎಸ್.ಲೋಕೇಶ್‌, ಆರ್.ಶಿವಕುಮಾರ್, ಎಂ.ಶಿವಶಂಕರ್, ಎನ್.ದೀಪಕ್, ಎಂ ಎಸ್. ದಿನೇಶ್, ವಿ. ರವಿ  ಚುನಾಯಿತರಾಗಿದ್ದಾರೆ.

RELATED ARTICLES
- Advertisment -
Google search engine

Most Popular