ಮೈಸೂರು: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿದ್ದು, ಕನ್ನಡವನ್ನು ಉಳಿಸಿ ಬೆಳಸಬೇಕಾದರೆ ಮೊದಲು ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ಕನ್ನಡ ಗೊತ್ತಿಲ್ಲದವರಿಗೆ ಕಲಿಸಬೇಕು ಎಂದು ಶಿಕ್ಷಣ ಇಲಾಖೆಯ ಸಹಾಯಕ ಯುವಜನ ಸಮನ್ವಯಾಧಿಕಾರಿ ಜಿ. ವೆಂಕಟಾಚಲ ಕರೆ ನೀಡಿದರು.
ಮೈಸೂರನ ವಿ.ವಿ. ಮೊಹಲ್ಲಾದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ೧ರಲ್ಲಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯ ಭೋಗಾದಿ ನ್ಯೂ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಭಾಷೆಗೆ ಎರಡು ಸಾವಿರ ವರ್ಷದ ಇತಿಹಾಸವಿದೆ. ಮಹಾಭಾರತ ಮತ್ತು ರಾಮಾಯಣದಲ್ಲಿ ಕರ್ನಾಟ ಎಂಬ ಉಲ್ಲೇಖವಿದೆ. ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು ಎನ್ನುತ್ತಾನೆ.
ಆದಿಕವಿ ಪಂಪ ಹೇಳುತ್ತಾನೆ ಈ ನಾಡಿನಲ್ಲಿ ಮರಿದುಂಬಿಯಾಗಿಯಾದರೂ ಹುಟ್ಟಬೇಕು ಎನ್ನುತ್ತಾನೆ. ಕನ್ನಡ ಸರಸ್ವತಿಯ ಎರಡು ಕಣ್ಣುಗಳೆಂದರೆ ದಾಸಸಾಹಿತ್ಯ ಮತ್ತು ವಚನಸಾಹಿತ್ಯ ಜಗತ್ತಿನ ಅತಿಶ್ರೇಷ್ಠವಾದ ಸಾಹಿತ್ಯಗಳು ಕನ್ನಡದಲ್ಲಿ ದೊಡ್ಡ ದೊಡ್ಡ ಸಾಹಿತಿಗಳ ಪರಂಪರೆಯೇ ಇದೆ. ಪ್ರಪಂಚದ ೫ ಸುಂದರ ಭಾಷೆಗಳಲ್ಲಿ ಕನ್ನಡವೂ ಒಂದು ಕನ್ನಡ ವಿಶ್ವ ಲಿಪಿಗಳ ರಾಣಿ ಎಂದು ಕರೆದಿದ್ದಾರೆ, ಯಾವುದೇ ಭಾಷೆಯನ್ನು ಬಳಸದಿದ್ದರೆ ಅದು ಮೃತ ಭಾಷೆಯಾಗುತ್ತದೆ. ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದಬೇಕು ಸಾಧ್ಯವಾಗದಿದ್ದರೆ ಕನ್ನಡವನ್ನು ಮೊದಲು ಭಾಷೆಯಾಗಿ ತೆಗೆದುಕೊಳ್ಳಬೇಕು ಕನ್ನಡಿಗರು ಪ್ರಪಂಚದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಚಾಪನ್ನು ಮೂಡಿಸಿದ್ದಾರೆ.
ಕನ್ನಡವನ್ನು ಓದುವವರು ಕಡಿಮೆಯಾಗಿದ್ದಾರೆ ಆದರೆ ಬೇರೆ ಬೇರೆ ದೇಶಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ. ಕನ್ನಡಕ್ಕೆ ಜರ್ಮನಿಯ ಕಿಟಲ್‌ನ ಪದಕೋಶ ಕೊಡುಗೆಯಾಗಿದೆ ಕನ್ನಡಿಗರಲ್ಲದವರೂ ಕೂಡ ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕುವೆಂಪು, ಬೇಂದ್ರೆ, ಮಾಸ್ತಿ, ಗೋಖಾಕ್, ಜಿ.ಪಿ.ರಾಜರತ್ನಂ, ಆಲೂರು ವೆಂಕಟರಾಯರು ಇನ್ನೂ ನೂರಾರು ಕವಿಗಳು ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ ಆದ್ದರಿಂದಕನ್ನಡ ಪುಸ್ತಕವನ್ನು ಹೆಚ್ಚಾಗಿ ಓದಿ ಬೆಳಸಿ ಉಳಿಸಿ ಎಂದರು. ಸಮಾರಂಭದಲ್ಲಿ ಶಿಕ್ಷಕರಾದ ಎಸ್.ಆನಂದ್, ಖ್ಯಾತಗಾಯಕ ಅಮ್ಮ- ರಾಮಚಂದ್ರ ನಿಲಯಪಾಲಕರಾದ ಎಸ್. ಗಾಯಿತ್ರಿ, ರುಕ್ಮಿಣಿ ಉಪಸ್ಥಿತರಿದ್ದರು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.