ಕೆ.ಆರ್.ನಗರ: ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಕಾರ್ಯ ನಿರ್ವಹಿಸಿದರೆ ಸಮಾಜಕ್ಕೆ ಸಿಗುವ ಫಲಿತಾಂಶ ಉತ್ತಮ ವಾಗಿರುತ್ತದೆ ಎಂದು ಸಾಲಿಗ್ರಾಮ ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಕೆ.ಮಧುಚಂದ್ರ ತಿಳಿಸಿದರು. ಅವರು ಕೆ.ಆರ್.ನಗರ ತಾಲ್ಲೂಕು ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳುನ್ನು ಸಾಲಿಗ್ರಾಮ ತಾಲ್ಲೂಕು ಜೆಡಿಎಸ್ ಘಟಕದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿದರು.
ಮಾಧ್ಯಮವು ಆಡಳಿತ ವ್ಯವಸ್ಥೆಯ ಕಣ್ಣು ಹಾಗೂ ಕಿವಿಯಾಗಿದ್ದು ಜನಪರ ಆಡಳಿತದಲ್ಲಿ ಅದು ನಿರ್ವಹಿಸುವ ಪಾತ್ರ ಮಹತ್ತರವಾದುದು. ಮಾಧ್ಯಮಗಳ ಮೇಲೆ ಜನತೆ ಹೊಂದಿರುವ ನಂಬಿಕೆಯನ್ನು ಪತ್ರಕರ್ತರು ಉಳಿಸಿ ಕೊಳ್ಳಬೇಕು ಎಂದರಲ್ಲದೆ ಪತ್ರಕರ್ತರು ವೃತ್ತಿಯಲ್ಲಿ ಕ್ರಿಯಾಶೀಲತೆ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಾಲಿಗ್ರಾಮ ತಾಲ್ಲೂಕಿನ ವ್ಯಾಪ್ತಿಯ ಪತ್ರಕರ್ತರು ತಾಲ್ಲೂಕು ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿನಯ್ ದೊಡ್ಡಕೊಪ್ಪಲು, ಪ್ರಧಾನ ಕಾರ್ಯದರ್ಶಿಯಾಗಿ ಭೇರ್ಯ ಮಹೇಶ್, ಕಾರ್ಯದರ್ಶಿಯಾಗಿ ಆನಂದ್ ಹೊಸೂರು, ಕಾರ್ಯಕಾರಿ ಸಮಿತಿಸದಸ್ಯರಾಗಿ ಆಯ್ಕೆಯಾದ ಚುಂಚನಕಟ್ಟೆ ಮಧು, ರೋಜಾಮಹೇಶ್ ಗ್ರಾಮಾಂತರ ಪ್ರದೇಶದವರಾಗಿದ್ದು ಇವರುಗಳನ್ನು ಸಾಲಿಗ್ರಾಮ ತಾಲ್ಲೂಕು ಜೆಡಿಎಸ್ ಘಟಕ ವತಿಯಿಂದ ಅಭಿನಂದಿಸುತ್ತಿರುವುದು ಶ್ಲಾಘನೀಯ ಎಂದರು.
ನಂತರ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು ಮಾತನಾಡಿ ನಿಮ್ಮಗಳ ಅಭಿಮಾನಕ್ಕೆ ನಾವುಗಳು ಎಂದಿಗೂ ಮರೆಯುವುದಿಲ, ಗ್ರಾಮಾಂತರ ಪ್ರದೇಶಗಳಲ್ಲಿ ವಸ್ತು ನಿಷ್ಠೆ ವರದಿ, ಸಾಮಾಜಿಕಬದ್ದತೆಯಿಂದ ನೊಂದವರಿಗೆ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೆ.ಆರ್.ನಗರ ತಾಲ್ಲೂಕು ಪತ್ರಕರ್ತರ ಸಂಘ ಬಹಳ ಜವಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದು, ಮುಂದೆಯು ಸಹ ನಿಮ್ಮಗಳ ಸಹಕಾರ ಸಂಘದ ಮೇಲೆ ಇರಲಿ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು, ಪ್ರಧಾನ ಕಾರ್ಯದರ್ಶಿ ಭೇರ್ಯ ಮಹೇಶ್, ಕಾರ್ಯದರ್ಶಿ ಆನಂದ್ ಹೊಸೂರು, ಕಾರ್ಯಕಾರಿ ಸಮಿತಿ ಸದಸ್ಯ ಚುಂಚನಕಟ್ಟೆ ಮಧು ಅವರುಗಳನ್ನು ಮೈಸೂರುಪೇಟ ತೊಡಿಸಿ, ಶಾಲು ಹೊದಿಸಿ ಹಾರಹಾಕಿ ಅಭಿನಂದಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತಂಬಾಕು ಮಂಡಳಿಯ ನಿವೃತ್ತ ಹರಾಜು ಅಧೀಕ್ಷಕ ಕೆ.ಎನ್.ದಿನೇಶ್, ಸಾಲಿಗ್ರಾಮ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಜೆಡಿಎಸ್ ಘಟಕದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲ್ಲೂಕು ಜಾದಳ ವಕ್ತಾರ ಕೆ.ಎಲ್.ರಮೇಶ್, ಶ್ರೀರಂಗಪಟ್ಟಣ ತಾಲ್ಲೂಕು ಯುವ ಜೆಡಿಎಸ್ ಘಟಕದ ಅಧ್ಯಕ್ಷ ಸಂಜಯ್, ತಾಲ್ಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಸಿ.ಶಿವರಾಮು, ಪತ್ರಕರ್ತ ಕೆ.ಟಿ.ರಮೇಶ್, ಲೇಖಕ ದೀಪು, ಜೆಡಿಎಸ್ ಮುಖಂಡರಾದ ಲಾಲೂಸಾಬ್, ಅಂಕನಹಳ್ಳಿ ಚಂದ್ರಶೇಖರ್, ಅನಂತು, ಬೆಣಗನಹಳ್ಳಿ ಪ್ರಸನ್ನ, ಯೋಗಣ್ಣ, ವೈ.ಎಸ್.ನಟರಾಜು, ಶ್ರೀನಿವಾಸ್ ಹಾಜರಿದ್ದರು.