ಕೆ.ಆರ್.ನಗರ : ಕನ್ನಡವನ್ನು ಕಟ್ಟುವ ಕೆಲಸ ಸರ್ಕಾರಗಳಿಗಿಂತ ಹಳ್ಳಿಗಾಡಿನ ಜನರು ನಿರಂತರ ಬಳಕೆ ಹಾಗೂ ನಿತ್ಯ ಜೀವನಧರ್ಮವಾಗಿಸಿಕೊಂಡ ಕಾರಣ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ ಎಂದು ಸರ್ಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷ ಶಿಕ್ಷಕ ಎ.ಕುಚೇಲ್ ಹೇಳಿದರು. ಸಾಲಿಗ್ರಾಮ ತಾಲ್ಲೋಕಿನ ಹೊಸೂರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಗರ ಪ್ರದೇಶಗಳಲ್ಲಿ ಇಂಗ್ಲೀಷ್ ವ್ಯಾಮೋಹದಿಂದ ಈ ನಾಡಿನ ಅಸ್ಮಿತೆಯಾಗಿರುವ ಕನ್ನಡವನ್ನು ದೂರ ಮಾಡುವ ಬೃಹತ್ ಹುನ್ನಾರವೊಂದು ನಿರಂತರವಾಗಿ ನಡೆಯುತ್ತಿರುವುದು ದುರದೃಷ್ಟಕರ ಸಂಗತಿ ಇಂದಿನ ಯುವ ಜನಾಂಗ ಇದನ್ನು ಹೋಗಲಾಡಿಸಿ ಭಾಷೆ ಹಾಗೂ ಜನಿಸಿದ ಮಣ್ಣನ್ನು ಎಂದಿಗೂ ಮರೆಯಬಾರದು ಎಂದರು. ಕಾರ್ಯಕ್ರಮದ ಅಂಗವಾಗಿ ಗ್ರಾಮದ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಮಾಜ ಸೇವಕ ಡಾ|| ಜನಾರ್ಧನ್ ಭಟ್,ಎಪಿಎಂಸಿ ಮಾಜಿ ನಿರ್ದೇಶಕ ಶಿವಸ್ವಾಮಿ,ಗ್ರಾಪಂ ಮಾಜಿ ಅಧ್ಯಕ್ಷರಾದ ದಿನೇಶ್,ಕೃಷ್ಣ,ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ,ಮಾಜಿ ಸದಸ್ಯ ಡೈರಿ ಮಾಧು,ಮುಖಂಡರಾದ ಯಶವಂತ್,ನಾಗರಾಜು,ಟೈಲರ್ ಸಂಘದ ಚಂದ್ರು,ಅವಿನಾಶ್,ಬಸವರಾಜು,ತೀರ್ಥರಾಜ್,ಉದ್ಯಮಿಗಳಾದ ಸೇಟು ರಮೇಶ,ಚಂದ್ರರಾಮ್ ,ಹೇಮರಾಜ್ ಶಿಕ್ಷಕ ಅವಿನಾಶ ಹಾಜರಿದ್ದರು.