ಪಾಂಡವಪುರ: ನಾಡಹಬ್ಬಗಳ ಆಚರಣೆ ಸೇರಿದಂತೆ ತಾಲೂಕು ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಅಸಮಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಆಡಳಿತ ಎಷ್ಟರ ಮಟ್ಟಿಗೆ ಅಧ್ವಾನಗೊಂಡಿದೆ ಎಂದರೆ ಕನ್ನಡ ರಾಜ್ಯೋತ್ಸವ ಕಾರ್‍ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಬಿಸಿಲಿನಲ್ಲಿ ಕೂರಿಸಿ ಕಾರ್‍ಯಕ್ರಮ ನಡೆಸಿದ್ದಾರೆ. ಹಲವಾರು ಮಕ್ಕಳು ಬಿಸಿಲಿನಿಂದ ತಲೆಸುತ್ತಿ ಬಿದ್ದಿದ್ದಾರೆ. ಮಕ್ಕಳಿಗೆ ತುಂಬ ಬಿಸಿಲಿದೆ ಎಂದು ಶಿಕ್ಷಕಿಯೊಬ್ಬರು ಬಿಇಓ ಚಂದ್ರಶೇಖರ್‌ಗೆ ದೂರು ನೀಡಿದರೆ ಆ ಶಿಕ್ಷಕಿಯನ್ನೇ ಗದರಿಸಿ, ಶಿಕ್ಷಕಿಯ ವಿರುದ್ದ ಕ್ರಮತೆಗೆದುಕೊಳ್ಳುತ್ತೇನೆ ಎಂದು ಧಮ್ಮಿಹಾಕುತ್ತಿದ್ದಾರೆ.
ಗಣ್ಯರು ಕುಳಿತುಕೊಳ್ಳುವುದಕ್ಕೆ ಮಾತ್ರ ಶಾಮಿಯಾನ ಹಾಕಿಸಿದ್ದಾರೆ ಮಕ್ಕಳು ಕುಳಿತುಕೊಳ್ಳಲು ಸಾಮಿಯಾನ ಬೇಡವಾ? ಶಾಲಾ ಮಕ್ಕಳು ಬಿಸಿಲಿನಲ್ಲಿ ಕುಳಿತುಕೊಳ್ಳಬೇಕಾ? ತಾಲೂಕು ಆಡಳಿತ ಅವ್ಯವಸ್ಥೆಯನ್ನು ನಾನು ಖಂಡಿಸುತ್ತೇನೆ. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ನಾಡಹಬ್ಬಗಳನ್ನು ವ್ಯವಸ್ಥಿತ ರೀತಿಯಲ್ಲಿ ಆಚರಣೆ ಮಾಡಬೇಕು. ಇಲ್ಲವಾದರೆ ಕಚೇರಿಗಳಿಗೆ ಬೀಗಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.