ಕೆ ಆರ್ ನಗರ: ಮಹಾಮಾರಿ ಕರೋನಾದಿಂದಾಗಿ ಮೂರು ನಾಲ್ಕು ವರ್ಷಗಳಿಂದ ನಿಲ್ಲಿಸಲಾಗಿದ್ದ ಕೆಆರ್ ನಗರದ ವಾರದ ಸಂತೆಗೆ ಇಂದು ಶಾಸಕ ಡಿ ರವಿಶಂಕರ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಹಿಂದಿನ ವರ್ಷಗಳಲ್ಲಿ ನಡೆಯುತ್ತಿದ್ದ ಜಾಗದಲ್ಲಿಯೇ ಇಂದಿನಿಂದ ಸಾರ್ವಜನಿಕ ಸಂತೆಯನ್ನು ಪುನರ್ ಆರಂಭ ಮಾಡಲಾಯಿತು.

ಈ ವೇಳೆ ಮಾತನಾಡಿದ ಶಾಸಕರು, ಕೋವಿಡ್ ಸಂದರ್ಭದಲ್ಲಿ ಇಲ್ಲಿ ನಡೆಯುತ್ತಿದ್ದ ಸಂತೆಯನ್ನು ನಿಲ್ಲಿಸಲಾಯಿತು. ಆದರೆ ಇಂದಿನಿಂದ ಪ್ರತಿ ಶುಕ್ರವಾರ ಇಲ್ಲಿ ಸಂತೆ ಆರಂಭವಾಗುತ್ತಿದೆ ಎಂದರು.
ಎಲ್ಲಾ ರೈತ ಬಾಂಧವರು ತಾವು ಬೆಳೆದ ತರಕಾರಿ ಮತ್ತು ಇನ್ನಿತರ ವಸ್ತುಗಳನ್ನು ಇಲ್ಲಿಯೇ ತಂದು ಮಾರಬೇಕು. ಇದರಿಂದಾಗಿ ರೈತರಿಗೆ ಹೆಚ್ಚು ಲಾಭವಾಗುತ್ತದೆ. ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತದೆ ಮತ್ತು ಸಾರ್ವಜನಿಕರು ಸಹ ಪ್ರತಿ ಶುಕ್ರವಾರ ಇಲ್ಲಿಯೇ ಬಂದು ತಮಗೆ ಬೇಕಾದ ಪದಾರ್ಥಗಳನ್ನು ಇಲ್ಲಿಯೇಕೊಳ್ಳಬೇಕು ಎಂದು ಮನವಿ ಮಾಡಿದರು.