Monday, April 21, 2025
Google search engine

Homeರಾಜ್ಯಸುದ್ದಿಜಾಲಬೆಂಬಲ ಬೆಲೆಯಲ್ಲಿ ನ. ೧೫ ರಿಂದ ಭತ್ತ ಖರೀದಿ: ಅಪರ ಜಿಲ್ಲಾಧಿಕಾರಿ

ಬೆಂಬಲ ಬೆಲೆಯಲ್ಲಿ ನ. ೧೫ ರಿಂದ ಭತ್ತ ಖರೀದಿ: ಅಪರ ಜಿಲ್ಲಾಧಿಕಾರಿ


ರಾಮನಗರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂ.ಎಸ್.ಪಿ) ರೈತರಿಂದ ಭತ್ತ ಖರೀದಿಸಲು ನ. ೧೫ರಿಂದ ರೈತರಿಂದ ನೋಂದಣಿ ಪ್ರಾರಂಭಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದರು.

ರೈತರು ಭತ್ತವನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡದೆ ನೇರವಾಗಿ ಸರ್ಕಾರ ಗುರುತುಪಡಿಸಿರುವ ಕೇಂದ್ರಗಳಲ್ಲಿ ಮಾರಾಟ ಮಾಡಬೇಕು ಹಾಗೂ ರೈತರಿಂದ ಭತ್ತಖರೀದಿಸಲು ೪ ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರ ತೆಲೆಯಲುಕ್ರಮವಹಿಸಲಾಗಿದೆ. ರೈತರಿಂದಭತ್ತ ಖರೀದಿಸಲು ರೈತರಿಗೆ ಅನುಕೂಲವಾಗುವಂತೆ ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗುವುದು. ರೈತರುರೈತ ಸಂಪರ್ಕ ಕೇಂದ್ರಗಳಲ್ಲಿ ಆರ್.ಟಿ.ಸಿ ಹಾಗೂ ಬೆಳೆಯ ಮಾಹಿತಿಯೊಂದಿಗೆ ನೋಂದಾಯಿಸಿಕೊಳ್ಳುವಂತೆ ಹಾಗೂ ಆರ್.ಟಿ.ಸಿಯಲ್ಲಿ ಭತ್ತ ನಮೂದಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳುವಂತೆ ತಿಳಿಸಿದರು.

ಭತ್ತವನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ ೨೫ ಕ್ವಿಂಟಾಲ್ ನಂತೆ ಗರಿಷ್ಟ ೪೦ ಕ್ವಿಂಟಾಲ್ ಖರೀದಿಸಲಾಗುವುದು ಒಂದೇ ಪಟ್ಟಿಯಲ್ಲಿ ಜಂಟಿ ಖಾತೆ ಇದ್ದರೆ ಆರ್.ಟಿ.ಸಿ ಯಲ್ಲಿ ಸರಿಪಡಿಸಿಕೊಳ್ಳಬೇಕು ಎಂದರು.
ರೈತರಿಂದ ಭತ್ತ ಖರೀದಿಸುವ ಸಂದರ್ಭದಲ್ಲಿರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಬೇಕು. ರೈತರುಭತ್ತ ಮಾರಾಟ ಮಾಡಲು ಯಾವುದೇ ಮಧ್ಯವರ್ತಿಗಳ ಸಹಾಯ ಪಡೆಯದೇ ರೈತ ಸಂಪರ್ಕ ಕೇಂದ್ರದಲ್ಲೇ ನೋಂದಣಿ ಮಾಡಿಕೊಂಡು, ಭತ್ತ ಮಾರಾಟ ಮಾಡುವಂತೆ ತಿಳಿಸಿದರು. ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸಲಾಗುವ ಅಕ್ಕಿಯನ್ನು ಕಡ್ಡಾಯವಾಗಿ ಸಾರವರ್ಧಿತಗೊಳಿಸಿ ಅಕ್ಕಿ ಗಿರಣಿಗಳಲ್ಲಿ ಬ್ಲೆಂಡರ್ ಯಂತ್ರವನ್ನು ಅಳವಡಿಸಿಕೊಂಡಿರುವ ಅಕ್ಕಿ ಗಿರಣಿಗಳನ್ನು ಮಾತ್ರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ಹಲ್ಲಿಂಗ್ ಮಾಡಲು ನೋಂದಾಯಿಸಿಕೊಂಡು ಅನುಪಾತದಲ್ಲಿ ಮಿಶ್ರಣಗೊಳಿಸುವುದನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಖಚಿತಪಡಿಸಕೊಳ್ಳಬೇಕು ಎಂದರು.

ರೈತರಿಂದ ಖರೀದಿಸಿದ ಭತ್ತದ ಮೊತ್ತವನ್ನು ಖರೀದಿಸಿದ ೧೫ ದಿನಗಳೊಳಗಾಗಿ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು . ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ರಮ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು,ಕೆ.ಎಫ್.ಸಿಎಸ್.ಸಿ ಜಿಲ್ಲಾ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular