ಮೈಸೂರು: ವರುಣಾಕ್ಷೇತ್ರದ ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಿಳಿಸಿದರು. ವರುಣಾ ಕ್ಷೇತ್ರದ ಹದಿನಾರು ಮೋಳೆ, ಹದಿನಾರು ಬೊಕ್ಕಳ್ಳಿ, ಹುಳಿಮಾವು, ಇಮ್ಮಾವು, ಇಮ್ಮಾವುಹುಂಡಿ, ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ, ದೇವಸ್ಥಾನ ಕಾಮಗಾರಿ ಗುದ್ದಲಿ ಪೂಜೆ, ಪಿಂಚಣಿ ಅದಾಲತ್ ಕಂದಾಯ ಅದಾಲತ್, ಇ.ಸ್ವತ್ತು ಅದಾಲತ್, ಜನಸಂಪರ್ಕ ಸಭೆಗಳನ್ನು ಮಾಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಬರಗಾಲ ಬಂದಿರುವ ಹಿನ್ನಲೆಯಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ.
ಆದರೂ ಸಹ ಸರ್ಕಾರ ರೈತರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು ಅಧಿಕಾರಿಗಳು ರೈತರನ್ನು ಕಛೇರಿಯಿಂದ ಕಛೇರಿಗೆ ಆಗ ಬನ್ನಿ ಈಗ ಬನ್ನಿ, ನಾಳೆ ಬನ್ನಿ ಎಂದು ಅಲೆಸಬೇಡಿ ಎಷ್ಟು ದಾಖಲೆಗಳು ಬೇಕಾಗಿದೆಯೋ ಅವೆಲ್ಲವನ್ನೂ ಒಂದೇ ಸಾರಿ ತರಲು ರೈತರಿಗೆ ತಿಳಿಸಿ. ಆಗ ಕೆಲಸ ಸುಲಭವಾಗುತ್ತದೆ. ವಿಧವಾವೇತನ, ವೃದ್ದಾಪ್ಯವೇತನದ ಪಿಂಚಣಿಯನ್ನು ತ್ವರಿತವಾಗಿ ಮಾಡಿಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಸಿ. ಬಸವರಾಜು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಗುರುಪಾದಸ್ವಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಜಿ.ಪಂ. ಮಾಜಿ ಸದಸ್ಯ ನಂಜಪ್ಪ, ಗ್ರಾ.ಪಂ. ಅಧ್ಯಕ್ಷೆ ಸಣ್ಣ ತಾಯಮ್ಮ, ಉಪಾಧ್ಯಕ್ಷ ಗೋವಿಂದ ಶೆಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಅಭಿ, ಗ್ರಾ.ಪಂ. ಸದಸ್ಯರು ಹಾಜರಿದ್ದರು.