Sunday, April 20, 2025
Google search engine

Homeಸ್ಥಳೀಯಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸುವ ಕಾರ್ಯಕ್ರಮ ಪ್ರತಿಭಾಕಾರಂಜಿ: ಸಿ.ಎನ್. ರಾಜು

ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸುವ ಕಾರ್ಯಕ್ರಮ ಪ್ರತಿಭಾಕಾರಂಜಿ: ಸಿ.ಎನ್. ರಾಜು

ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯು ಪ್ರತಿಭೆಅಡಗಿದೆ,ಅಂತಹ ಪ್ರತಿಭೆಯನ್ನು ಅನಾವರಣಗೊಳಿಸುವುದು ಮುಖ್ಯವೇ ಹೊರತುಇಲ್ಲಿ ಸೋಲು ಗೆಲುವು ಮುಖ್ಯವಲ್ಲ,ಭಾಗವಹಿಸುವಿಕೆ ಮತ್ತುಪ್ರಯತ್ನ ಮುಖ್ಯಎಂದು ಮೈಸೂರು ನಗರದಕ್ಷಿಣ ವಲಯದಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎನ್. ರಾಜುರವರುಕರೆ ನೀಡಿದರು.

ಇಂದು ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿಜರುಗಿದ ಮೈಸೂರು ದಕ್ಷಿಣ ವಲಯ ಮಟ್ಟದ ಪ್ರತಿಭಾಕಾರಂಜಿ ಮತ್ತುಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದಅವರುಇದೊಂದು ವಿನೂತವ ಪರಿಕಲ್ಪನೆಯ ಕಾರ್ಯಕ್ರಮವಾಗಿದ್ದು ಘನ ಸಕಾರವು ಕಳೆದ ೨೦ವರ್ಷಗಳಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿದ್ದು ಶಾಲಾ ಪಠ್ಯೇತರಚಟುವಟಿಕೆಯಒಂದು ಭಾಗವಾಗಿ ವಿದ್ಯಾಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರೆರಕ ಶಕ್ತಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಸಂತಸದಿಂದ ಸಕ್ರೀಯವಾಗಿ ಭಾಗವಹಿಸಬೇಕು ಎಂದು ತಿಳಿಸಿ ನಮ್ಮ ವಲಯದ ಮಕ್ಕಳು ಜಿಲ್ಲಾ, ರಾಜ್ಯ ಮಟ್ಟಕ್ಕೆತಲುಪಿ ತಮ್ಮ ಪ್ರತಿಭಾ ಪ್ರದರ್ಶನವನ್ನು ಅಭಿವ್ಯಕ್ತಪಡಿಸಿ ಯಶಸ್ಸನ್ನು ಗಳಿಸಲಿಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಬಿ.ಆರ್.ಸಿ. ಶ್ರೀಕಂಠಸ್ವಾಮಿ, ದೈ.ಶಿ. ಪರಿವೀಕ್ಷಕರಾದ ಶ್ರೀನಿವಾಸ್, ಪ್ರೌಢಶಾಲಾ ಶಿಕ್ಷಕರ ಸಂಘದಅಧ್ಯಕ್ಷರಾದಎನ್ ನಾಗರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಅಧ್ಯಕ್ಷರಾದ ಹರ್ಷ, ತಾಲ್ಲೂಕು ದೈ,ಶಿ,ಸಂಘದ ಅಧ್ಯಕ್ಷರಾದಗಂಗೆಶ್, ಪದಾಧಿಕಾರಿಗಳಾದ ನಾಗಸುಂದರ್, ಜಯರಾಮ ಭಟ್, ಶಿಕ್ಷಣ ಸಂಯೋಜಕರಾದ ಮನೋಹರ್, ಕುಮಾರ್, ಲಿಂಗರಾಜು, ಬಿ.ಆರ್.ಪಿ ಶ್ರೀಕಂಠ ಶಾಸ್ತ್ರಿ, ಮಲ್ಲಿಕಾಜುನ, ರಾಜಮ್ಮ ಸಿ.ಆರ್.ಪಿ ಮಣಿಕಂಠ, ಮುಖ್ಯಶಿಕ್ಷಕರಾದ ನಂಜರಾಜು ವಿಶಾಲಾಕ್ಷಿಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular