ಮೈಸೂರು: ಜಯಲಕ್ಷ್ಮಿ ಪುರಂನ ಎಸ್‌ವಿಇಐ ಶಾಲೆಯ ಮಕ್ಕಳು ಇಂದು ಎಂದಿನಂತೆ ಸಮವಸದಲ್ಲಿ ಇರಲಿಲ್ಲ. ಬದಲಾಗಿ, ವಿವಿಧ ವೇಷ ಭೂಷಣಗಳನ್ನು ತೊಟ್ಟು ಗಮನ ಸೆಳೆದರಲ್ಲದೇ ಇಡೀ ಶಾಲಾ ವಾತಾವರಣವನ್ನೇ ವರ್ಣರಂಜಿತಗೊಳಿಸಿದ್ದರು. ಜೊತೆಗೆ ಪುಟ್ಟ ವೇದಿಕೆಯಲ್ಲಿ ತಮ್ಮ ತಮ್ಮ ಮುಗ್ಧ ತೊದಲು ಮಾತುಗಳ ಮೂಲಕ ರಂಜಿಸಿದರು.
ಶಾಲೆಯ ಪುಟ್ಟ ಪುಟ್ಟ ಮಕ್ಕಳು ಯಶಸ್ವೀ ಚಂದ್ರಯಾನ, ಕಾಂತಾರದ ದೈವ, ಚಿತ್ರದುರ್ಗದ ಒನಕೆ ಓಬವ್ವ, ಶಕುಂತಲಾ, ಋಷಿ, ಸ್ವಾಮಿ ವಿವೇಕಾನಂದ, ಟ್ರಾಫಿಕ್ ಸಿಗ್ನಲ್, ಸಾಂತಾಕ್ಲಾಸ್, ರೈತ, ರಾಜಕುಮಾರಿ, ಇನೋಸಿಸ್‌ನ ಸುಧಾಮೂರ್ತಿ, ಶಾಲಾ ಶಿಕ್ಷಕಿ, ಮೈಸೂರು ಮಹಾರಾಜಾ.. ಹೀಗೆ ನಾನಾ ವೇಷ ಭೂಷಣಗಳಲ್ಲಿ ಮಕ್ಕಳು ರಂಜಿಸಿದರೆ, ಆಲದ ಮರದ ವೇಷ ತೊಟ್ಟು ಪರಿಸರ ಪ್ರeಯ ಅರಿವನ್ನೂ ಮೂಡಿಸಿದರು. ಇವರನ್ನು ತಯಾರು ಮಾಡಿಕೊಂಡು ಬರುವಲ್ಲಿ ಪೋಷಕರ ಕ್ರಿಯಾಶೀಲತೆಯೂ ಕೂಡಾ ಮೆಚ್ಚುಗೆಗೆ ಪಾತ್ರವಾಗಿತ್ತು ಸರಳವಾಗಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕೆಲ ಪೋಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮಿ, ಶಿಕ್ಷಕಿಯರಾದ ಶಕುಂತಲಾ, ಲಲಿತಾ, ಗೀತಾ, ಪಾರ್ವತಿ, ಶಾಲೆಯ ಪೋಷಕರು ಉಪಸ್ಥಿತರಿದ್ದರು.