ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶ್ರೀ ವಾಲ್ಮೀಕಿ ರಾಮಾಯಣದ ಜೀವನ ಮೌಲ್ಯಗಳು ಕುರಿತು ಕಾರ್ಯಕ್ರಮ ಜರುಗಿತು.
ಮಾನವೀಯ ಮೌಲ್ಯಗಳ ಅದ್ಭುತ ಕಣಜ ರಾಮಾಯಣದಲ್ಲಿ ತುಂಬಿದೆ. ರಾಮಾಯಣವನ್ನು ರಚಿಸಿದ ವಾಲ್ಮೀಕಿ ಅವರು ಅಜರಾಮರ. ಮಾನವ ಸಂಕುಲಕ್ಕೆ ಶ್ರೀರಾಮನ ಶಕ್ತಿಯನ್ನು ಪರಿಚಯಿಸಿದ ವಾಲ್ಮೀಕಿ ರಚನೆ ವಿಶ್ವ ದಾಖಲೆ ಎಂದು ಬರಹಗಾರ ಲಕ್ಷ್ಮಿ ನರಸಿಂಹ ತಿಳಿಸಿದರು. ರಾಮಾಯಣದ ಸುಂದರಕಾಂಡ, ಬಾಲ ಕಾಂಡ, ಕಿಷ್ಕಿಂದ ಕಾಂಡ, ಅರಣ್ಯ ಕಾಂಡ, ಅಯೋಧ್ಯಾ ಕಾಂಡ ಗಳಲ್ಲಿ ರಾಮನ ಬಗ್ಗೆ, ಅಪಾರ ಜೀವನ ಮೌಲ್ಯಗಳಿಗೆ ವಾಲ್ಮೀಕಿ ರವರು ಮಹತ್ವ ನೀಡಿದ್ದಾರೆ. ಭಾರತಕ್ಕೆ ರಾಮಾಯಣ, ಮಹಾಭಾರತ ,ಭಗವದ್ಗೀತೆಗಳು ಸಾಹಿತ್ಯದ ಚಿಂತನೆ ಮತ್ತು ಸಂಶೋಧನೆಗೆ ಸಾವಿರಾರು ವರ್ಷಗಳ ನಂತರವೂ ವಿಶ್ವದಲ್ಲಿ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಪ್ರತಿನಿತ್ಯ ರಾಮಾಯಣಕ್ಕೆ ಹೊಸ ಹೊಸ ಅರ್ಥಗಳು ಹೊರ ಬರುತ್ತಿರುವುದನ್ನು ಕಾಣಬಹುದಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ನಿವೃತ್ತ ಶಿಕ್ಷಕರಾದ ಸರಸ್ವತಿ ರವರು ಶ್ರೀ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಸಲ್ಲಿಸಿ ಉದ್ಘಾಟಿಸಿದರು. ಸಾಹಿತ್ಯ ಅಧ್ಯಯನದ ಮೂಲಕ ಮಹಾಕಾವ್ಯಗಳನ್ನು ತಿಳಿಸುವ, ತಿಳಿಯುವ ಕಾರ್ಯ ಮಾಡಬೇಕಿದೆ. ಭಾರತದ ಮಹಾಕಾವ್ಯಗಳು ಹಾಗೂ ಕನ್ನಡದಲ್ಲಿ ರಚಿಸಿರುವ ಅಮೂಲ್ಯವಾದ ಗ್ರಂಥಗಳನ್ನು ತಿಳಿಸುವ ಮತ್ತು ಅದರ ಬಗ್ಗೆ ಸಂವಾದಗಳನ್ನು ನಡೆಸುವ ಅಗತ್ಯವಿದೆ. ಸಾಹಿತ್ಯದ ಅಭಿಮಾನಿಗಳು ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷರಾದ ಚಾ ರಂ ಶ್ರೀನಿವಾಸಗೌಡ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಮಹಾಕಾವ್ಯಗಳ ಬಗ್ಗೆ ಅದರಲ್ಲೂ ವಾಲ್ಮೀಕಿ ರಾಮಾಯಣದ ಜೀವನ ಮೌಲ್ಯಗಳ ಬಗ್ಗೆ ಕಾರ್ಯಕ್ರಮ ರೂಪಿಸಿ ರಾಮಾಯಣದ ಶ್ರೇಷ್ಠ ಅಂಶಗಳು ಮಾನವನ ಮೇಲೆ ಇಂದಿಗೂ ಪ್ರಭಾವವಿದೆ. ಪ್ರತಿ ಮಂಗಳವಾರ ಸಂಜೆ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ಕ್ರಮ ರೂಪಿಸುತ್ತಿರುವುದು ಮೆಚ್ಚುಗೆ ಎಂದರು.
ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಮಾತನಾಡುತ್ತಾ ಭಾರತದ ವೇದ ಸಾಹಿತ್ಯ ಹಾಗೂ ಉಪನಿಷತ್ತುಗಳು, ಪುರಾಣಗಳು, ಧರ್ಮ ಗ್ರಂಥಗಳು ನಿಜವಾದ ಅಧ್ಯಯನ ಹಾಗೂ ವಿಶಾಲ ದೃಷ್ಟಿಕೋನದಲ್ಲಿ ಚಿಂತಿಸುವ ಕಾಲ ಬಂದಿದೆ. ವಾಲ್ಮೀಕಿ ರಾಮಾಯಣವು ನಾಲ್ಕು ಲಕ್ಷಕ್ಕೂ ಅಧಿಕ ಶಬ್ದಗಳನ್ನು ಹೊಂದಿರುವುದು ಸಾಹಿತ್ಯದ ಶ್ರೇಷ್ಠ ಅಂಶವಾಗಿದೆ.
ವಾಲ್ಮೀಕಿ ರಾಮಾಯಣ ರಾಮನ ಕುರಿತ ವ್ಯಕ್ತಿತ್ವದ ಅನಾವರಣವಾಗಿದ್ದರೂ ಅದರಲ್ಲಿ ಪ್ರತಿಯೊಬ್ಬ ಮನುಷ್ಯನು ಅರ್ಥಮಾಡಿಕೊಳ್ಳುವ ವಿಶ್ವ ವ್ಯಾಪಕತೆ ಇರುವ ಅಂಶಗಳ ಸಾಹಿತ್ಯವಾಗಿದೆ. ವಾಲ್ಮೀಕಿ ರಾಮಾಯಣವನ್ನು ತಿಳಿಸುವ ಕಾರ್ಯವಾಗಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸುರೇಶ್ ಗೌಡ, ಬೊಮ್ಮಾಯಿ, ಬಿ ಕೆ ಆರಾಧ್ಯ, ಮಹೇಶ್, ಕೃಷ್ಣ ,ಪಾಂಡುರಂಗ ಮುಂತಾದವರು ಉಪಸ್ಥಿತರಿದ್ದರು