ಹೊಸೂರು : ಸಾಲಿಗ್ರಾಮ ತಾಲೂಕಿನ ಮಿರ್ಲೆ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಂ.ಎಸ್. ಭಾಸ್ಕರ ಮತ್ತು ಉಪಾಧ್ಯಕ್ಷರಾಗಿ ಎಂ.ಕೆ ಕೃಷ್ಣಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಸೋಮವಾರ ಸಂಘದ ಆಡಳಿತ ಮಂಡಳಿಯ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ಭಾಸ್ಕರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಕೆ.ಕೃಷ್ಣಶೆಟ್ಟಿ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹುಣಸೂರು ಸಹಕಾರ ಇಲಾಖೆಯ ಅಧಿಕಾರಿ ಸಿ.ಎನ್.ಗಿರೀಶ್ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ನಂತರ ಮಾತನಾಡಿದ ಎಂ.ಎಸ್.ಭಾಸ್ಕರ್ ಜಿಲ್ಲಾ ಸಹಕಾರ ಬ್ಯಾಂಕಿನಿಂದ ಸಿಗುವ ಸವಲತ್ತುಗಳು ಸಂಘದ ಷೇರುದಾರರಿಗೆ ಒದಗಿಸಿಕೊಡುವುದರ ಜತಗೆ ರೈತರಿಗೆ ದೀರ್ಘಾವಧಿ,ಮದ್ಯಾವಧಿ,ಟ್ಯಾಕ್ಟರ್ ಸಾಲ ನೀಡುವುದು ಅಲ್ಲದೇ ಗ್ರಾಮಕ್ಕೆ ಜಿಲ್ಲಾ ಬ್ಯಾಂಕಿನ ಶಾಖೆ ತೆರೆಯಲು ಕ್ರಮಕೈಗೊಳ್ಳಲಾಗುವುದು ಎಂದರು.
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕ ಮುತ್ತೂಟ್ ರಂಗಸ್ವಾಮಿ, ಎಂ.ಎಸ್ ದ್ರುವಕುಮಾರ್,ಎಂ.ಕೆ.ಕಿರಣ್ ಕುಮಾರ್,ಎಂ.ಕೆ.ನಟರಾಜ್,ಬೈರಾಜಿ,ಪಾಪನಾಯಕ,ಎಂ.ವಿ.ರಮೇಶ್,ಎಂ.ಬಿ.ಕಮಲಮ್ಮ,ಸುಶೀಲಮ್ಮ, ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ಸತೀಶ್ ಇದ್ದರು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತಯೇ ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ,ಪ್ರಧಾನ ಕಾರ್ಯದರ್ಶಿ ರಾಧಕೃಷ್ಣ,ಉಪಾಧ್ಯಕ್ಷ ಹೆಡ್ ಮುನ್ಸಿ ತುಕಾರಾಂ, ಧರ್ಮದರ್ಶಿ ಎಂ.ಎಲ್.ಲೋಕೇಶ್ ಮುಖಂಡರಾದ ಎಂ.ಎಲ್, ಧನಂಜಯ, ನಟರಾಜು, ಡೈರಿ ನಿರ್ದೇಶಕ ಹೊಸಟ್ಟಿ ರಘು, ಎಂ.ಆರ್ ಸಂತೋಷ್,ಬೀಚನಹಳ್ಳಿ ಮಂಜು ಗ್ರಾ.ಪಂ.ಅಧ್ಯಕ್ಷ ಬಾಲು,ಮಾಜಿ ಅಧ್ಯಕ್ಷ ಸುದರ್ಶನ್, ಮಾಜಿ ಸದಸ್ಯ ಎಂ.ಕೆ.ಮುರುಳಿ,ಸಂಘದ ಮಾಜಿ ಸದಸ್ಯ ಎಂ.ಆರ್.ನಾಗೇಶ್ ಸೇರಿದಂತೆ ಮತ್ತಿತರರು ಪಟಾಕಿ ಸಿಡಿಸಿ ವಿಜಿಯೋತ್ಸವ ಆಚರಿಸಿದರು.