ತುಮಕೂರು: ಸರ್ಕಾರ ಬದಕಿದ್ದು ಸತ್ತಂತಿದೆ. ನಾನೇ ಖುದ್ದಾಗಿ ಬಂದು ಸಮಸ್ಯೆ ಆಲಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ತುಮಕೂರು ಕೈಗಾರಿಕೆಯಲ್ಲಿ ಬಹಳಷ್ಟು ಅಭಿವೃದ್ಧಿ ಆಗುತ್ತಿದೆ. ಚೇಂಬರ್ ಆಫ್ ಕಾಮರ್ಸ್ ಮುಖಂಡರು ಜ್ವಲಂತ ಸಮಸ್ಯೆಗಳನ್ನ ಗಮನಕ್ಕೆ ತಂದಿದ್ದಾರೆ. ವಿದ್ಯುತ್ ಅಭಾವ, ಕುಡಿಯುವ ನೀರಿನ ಸಮಸ್ಯೆ. ದುಡಿಯುವ ಕೈಗಳಿಗೆ ಕೆಲಸ ಇಲ್ಲ. ತುಮಕೂರು ಜಿಲ್ಲೆಯ ಇಬ್ಬರೂ ಸಚಿವರುಗಳು ಸಮಸ್ಯೆ ತಿಳಿದುಕೊಂಡು ಸ್ಥಳದಲ್ಲೇ ಬಗೆಹರಿಸುವ ಕೆಲಸ ಮಾಡಬೇಕಿತ್ತು ಎಂದು ತಿಳಿಸಿದರು.
ನಾವು ಬರ ಅಧ್ಯಯನ ಮಾಡ್ತಿವಿ ಅಂದಾಗ ಡಿಕಿಶಿ, ಸಿ.ಎಂ ಹಗುರವಾಗಿ ಮಾತಾಡಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಮತ್ತೊಂದು ಕಡೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ ಎಂದು ಸಿಎಂ, ಡಿಸಿಎಂ ಗೆ ಎಚ್ಚರಿಕೆ ನೀಡಿದರು.
ಕೇಂದ್ರ ತಂಡ ಬರ ಅಧ್ಯಯನ ನಡೆಸಿದೆ. ಕೇಂದ್ರ ಪರಿಹಾರ ಕೊಟ್ಟೆ ಕೊಡುತ್ತೆ. ನಾವು ಅಧಿಕಾರದಲ್ಲಿದ್ದಾಗ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸಿದ್ದೆ ಕೇಂದ್ರ ಸರ್ಕಾರ ಅನುದಾನ ಕೊಡಲಿ ಅಂತಾ ಕಾಯ್ತಾ ಇರಲಿಲ್ಲ. ತಕ್ಷಣವೇ ಅನುದಾನ ಕೊಟ್ಟು , ಆನಂತರ ಕೇಂದ್ರ ಕೊಟ್ಟಾಗ ಸರಿದೂಗಿಸಿಕೊಳ್ಳುತ್ತಿದ್ದೇವೆ ಎಂದರು.