ರಾಮನಗರ: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಒಂದು ಜಿಲ್ಲೆಗೆ ಒಂದು ಕ್ರೀಡೆಯೋಜನೆಯಡಿ ರಾಮನಗರ ಜಿಲ್ಲೆಗೆ ಪ್ರಸಿದ್ದ ಕ್ರೀಡೆ ಕಬಡ್ಡಿ ಯನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅವರು ಅಭಿಪ್ರಾಯಪಟ್ಟರು.
ಅವರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಒಂದು ಜಿಲ್ಲೆಗೆ ಒಂದು ಕ್ರೀಡೆಯೋಜನೆಗೆ ಜಿಲ್ಲೆಯಲಿರುವ ಪ್ರಚಲಿತ ಕ್ರೀಡೆಯನ್ನು ಗುರುತಿಸುವ ಸಲುವಾಗಿ ಜಿಲ್ಲಾಕ್ರೀಡಾಂಗಣ ವ್ಯವಸ್ಥಾಪಕ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಿತಿಯ ತೀರ್ಮಾನದಂತೆಕ ಬಡ್ಡಿಯನ್ನು ಆಯ್ಕೆ ಮಾಡಬಹುದಾಗಿದೆ ಎಂದರು.
ಸ್ಥಳೀಯವಾಗಿ ಪ್ರಸಿದ್ದಗೊಂಡ ಕ್ರೀಡೆಗಳು ಹಾಗೂ ಆ ಕ್ರೀಡಾಪಟುಗಳನ್ನು ಗುರುತಿಸಿಅವರನ್ನು ಮತ್ತಷ್ಟು ಪ್ರತಿಭಾವಂತರನ್ನಾಗಿಸುವ ನಿಟ್ಟಿನಲ್ಲಿ ಒಂದು ಜಿಲ್ಲೆಗೆ ಒಂದು ಕ್ರೀಡೆಯೋಜನೆ ಅತ್ಯಂತ ಉಪಯುಕ್ತವಾಗಿದೆಜಿಲ್ಲೆಯಕಬಡ್ಡಿ ಕ್ರೀಡಾಪಟುಗಳು ಜಿಲ್ಲೆ, ರಾಜ್ಯ,ರಾಷ್ಟ್ರ ಮತ್ತುಅಂತರಾಷ್ಟ್ರೀಯ ಮಟ್ಟದಲ್ಲಿಖ್ಯಾತಿ ಗಳಿಸಿದ್ದಾರೆ, ಆ ನಿಟ್ಟಿನಲ್ಲಿಜಿಲ್ಲೆಯಲ್ಲಿಕಬಡ್ಡಿಯನ್ನುಆಯ್ಕೆ ಮಾಡಿಕೊಳ್ಳಬಹುದು. ದೇಶ ಹಾಗೂ ರಾಜ್ಯದ ಪ್ರಸಿದ್ದ ಕ್ರೀಡೆಕ ಬಡ್ಡಿಯಾಗಿರುವುದರಿಂದ ಹೆಚ್ಚು ಜಿಲ್ಲೆಗಳಲ್ಲಿ ಇದೇ ಕ್ರೀಡೆಯನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ, ಆದಕಾರಣ ಕಬಡ್ಡಿಗೆ ಪರ್ಯಾಯವಾಗಿ ವಾಲಿಬಾಲ್ ಅನ್ನು ಸಹ ಒಂದು ಜಿಲ್ಲೆಗೆ ಒಂದು ಕ್ರೀಡೆಯೋಜನೆಯಡಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ, ನೆಹರು ಯುವ ಕೇಂದ್ರದ ಅಧಿಕಾರಿ ಸೇರಿದಂತೆ ಸಂಬಂಧಿಸಿದವರು ಸಭೆಯಲ್ಲಿದ್ದರು.